ಹುನಗುಂದ, ಜ 17 ( DaijiworldNews/MS): ಇಬ್ಬರು ಪುತ್ರಿಯರ ಜೊತೆ ಘಟಪ್ರಭಾ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಬಳಿ ನಡೆದಿದೆ.
ಮ್ರ್ತರನ್ನು ಸೂಳೆಬಾವಿ ಗ್ರಾಮದ ಉಮಾ ಮಾಸರೆಡ್ಡಿ(42) ಹಾಗೂ ಪುತ್ರಿಯರಾದ ಐಶ್ವರ್ಯ(20), ಸೌಂದರ್ಯ(18) ಎಂದು ಗುರುತಿಸಲಾಗಿದೆ.ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ತಾಯಿ ಉಮಾ ಮಾಸರೆಡ್ಡಿ ತನ್ನ ಇಬ್ಬರು ಮಕ್ಕಳೊಂದಿಗೆ ಕಮತಗಿ ಬಳಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿ ಮಲಪ್ರಭಾ ನದಿಯಿಂದ ಮೂವರ ಶವ ಹೊರತೆಗೆದಿದ್ದಾರೆ. ಈ ಸಂಬಂಧ ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ