ನವದೆಹಲಿ, ಜ 17 ( DaijiworldNews/MS): "ನಾವು ಸಂಸತ್ತಿನಲ್ಲಿ ಜನರ ಧ್ವನಿಯನ್ನು ಎತ್ತಲು ಪ್ರಯತ್ನಿಸಿದ್ದೇವೆ, ಆದರೆ ಬಿಜೆಪಿ ಅದಕ್ಕೆ ಅವಕಾಶ ನೀಡಲಿಲ್ಲ" ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯೂ ಕನ್ಯಾಕುಮಾರಿಯಿಂದ ಪಂಜಾಬ್ ಮಾರ್ಗವಾಗಿ ಹಿಮಾಚಲ ಪ್ರದೇಶ ತಲುಪಿದ್ದು, ಹಿಮಾಚಲದ ಘಟೋಟಾದಲ್ಲಿ ಅವರು ಸಾರ್ವಜನಿಕ ಸಭೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಭಾರತ್ ಜೋಡೋ ಯಾತ್ರೆ ಆರಂಭಿಸುವ ಮುನ್ನ ನಾವು ಸಂಸತ್ತಿನಲ್ಲಿ ಜನರ ಧ್ವನಿ ಎತ್ತಲು ಪ್ರಯತ್ನಿಸಿದ್ದೆವು. ಆದರೆ ಬಿಜೆಪಿಯವರು ಸಂಸತ್ತಿನಲ್ಲಿ ಸಮಸ್ಯೆಗಳನ್ನು ಪ್ರಸ್ತಾಪಿಸಲು ಅವಕಾಶ ನೀಡಲಿಲ್ಲ. ಅಭಿಪ್ರಾಯ ಹೇಳಲು ಸಹ ಬಿಡುವುದಿಲ್ಲ ಪ್ರತಿಯೊಬ್ಬರು ಬಿಜೆಪಿ ಆರ್ ಎಸ್ ಎಸ್ ನ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದಿದ್ದಾರೆ.
ನ್ಯಾಯಾಂಗವಿರಲಿ, ಪತ್ರಿಕಾರಂಗವಿರಲಿ ಇವೆಲ್ಲವೂ ಬಿಜೆಪಿ-ಆರ್ಎಸ್ಎಸ್ನ ಒತ್ತಡದಲ್ಲಿವೆ. ಆದ್ದರಿಂದ, ನಾವು ಕನ್ಯಾಕುಮಾರಿಯಿಂದ ಪ್ರಯಾಣವನ್ನು ಪ್ರಾರಂಭಿಸಿದ್ದು ಇಂದು ನಿಮ್ಮನ್ನು ತಲುಪುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ