ನವದೆಹಲಿ, ಜ 18 (DaijiworldNews/HR): ಸರ್ಕಾರಿ ನೌಕರ ಪತಿಯ ಮರಣದ ಬಳಿಕ ವಿಧವೆಯೊಬ್ಬಳು ದತ್ತು ಪಡೆದ ಮಗುವಿಗೆ ಕುಟುಂಬ ಪಿಂಚಣಿಗೆ ಅರ್ಹತೆ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ, 1956 ರ ಸೆಕ್ಷನ್ 8 ಮತ್ತು 12 ರ ಪ್ರಕಾರ ಹಿಂದೂ ಮಹಿಳೆಯು ಅಪ್ರಾಪ್ತ ಅಥವಾ ಮಾನಸಿಕವಾಗಿ ಅಸ್ವಸ್ಥಳಲ್ಲದ ತನ್ನ ಸ್ವಂತ ಹಕ್ಕಿನ ಮಗ ಅಥವಾ ಮಗಳನ್ನು ದತ್ತು ತೆಗೆದುಕೊಳ್ಳಲು ಅವಕಾಶ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.
ಇನ್ನು ಹಿಂದೂ ಮಹಿಳೆ ತನ್ನ ಗಂಡನ ಒಪ್ಪಿಗೆಯಿಲ್ಲದೆ ದತ್ತು ಪಡೆಯುವಂತಿಲ್ಲ. ದತ್ತು ಪಡೆದ ಮಗುವಿಗೆ ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮ 54 (14) (ಬಿ) ಮತ್ತು 1972 ರ CCS (ಪಿಂಚಣಿ) ನಿಯಮಗಳ ಅಡಿಯಲ್ಲಿ ಕುಟುಂಬ ಪಿಂಚಣಿಗೆ ಅರ್ಹತೆ ಇರುವುದಿಲ್ಲ ಎಂದಿದೆ.