ಯಾದಗಿರಿ, ಜ 19 ( DaijiworldNews/MS): ಪ್ರಧಾನಿ ಮೋದಿ ಇಂದು ರಾಜ್ಯದ ಸುಮಾರು 10,800 ಕೋಟಿ ಮೊತ್ತದ ಕೋಟಿ ಮೊತ್ತದ ಅಭಿವೃದ್ದಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಯಾದಗಿರಿ ಜಿಲ್ಲೆ ಕೊಡೇಕಲ್ನಲ್ಲಿ ನೀರಾವರಿ, ಹೆದ್ದಾರಿ ಯೋಜನೆಗಳ ಶಿಲಾನ್ಯಾಸ ನೆರವೇರಿಸುವರು. ನಾರಾಯಣಪುರ ಎಡದಂಡೆ ಕಾಲುವೆಯ ದೇಶಕ್ಕೆ ಮಾದರಿಯಾಗುವ 4700 ಕೋಟಿ ರೂ. ನೀರಾವರಿ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲದೆ, ಸುಮಾರು 2000 ಕೋಟಿ ವೆಚ್ಚದ ಸೂರತ್-ಚೆನ್ನೈ ಎಕ್ಸ್ಪ್ರೆಸ್ ವೇಯ 65 ಕಿಮೀ 6ಲೇನ್ ಗ್ರೀನ್ ಫೀಲ್ಡ್ ರಸ್ತೆ ಯೋಜನೆಗೂ ಅಡಿಗಲ್ಲು ಹಾಕಲಿದ್ದಾರೆ.
ಈ ತಿಂಗಳು ಕರ್ನಾಟಕಕ್ಕೆ ಪ್ರಧಾನಿಯವರ ಎರಡನೇ ಭೇಟಿ ಇದಾಗಿದೆ. ಅವರು ಜನವರಿ 12 ರಂದು ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಿ, ಬೃಹತ್ ರೋಡ್ ಶೋ ನಡೆಸಿದ್ದರು. ಒಟ್ಟಾರೆ ಕರ್ನಾಟಕ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಪ್ರಧಾನಿ ಮೋದಿ ರಾಜ್ಯ ಪ್ರವಾಸ ಮಹತ್ವ ಪಡೆದುಕೊಂಡಿದೆ.