ಚೆನ್ನೈ, ಜ 19 (daijiworldNews/HR): ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಎ.ಆರ್ ರೆಹಮಾನ್ ಅವರ ಸ್ಟುಡಿಯೋದಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಒರ್ವ ತಂತ್ರಜ್ಞ ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚೆನ್ನೈನ ಪಂಚಥಾನ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ರೆಹಮಾನ್ ಕಾರ್ಯಕ್ರಮ ಆಯೋಜಿಸಲಿದ್ದು, ಇದಕ್ಕಾಗಿ ವ್ಯವಸ್ಥೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಸ್ಟುಡಿಯೋದಲ್ಲಿ ಲೈಟ್ ಹಾಕುವ ವೇಳೆ ಅವಘಡ ಸಂಭವಿಸಿ ವಿದ್ಯುತ್ ಸ್ಪರ್ಶದಿಂದ ಲೈಟ್ ಮ್ಯಾನ್ ಸಾವನ್ನಪ್ಪಿದ್ದಾರೆ.
ಇನ್ನು ಈ ಅಪಘಾತದ ಬಗ್ಗೆ ಹಲವು ತಮಿಳು ವೆಬ್ಸೈಟ್ಗಳು ಸುದ್ದಿ ಬರೆದಿದೆ. ಆದರೆ ಈ ಬಗ್ಗೆ ರೆಹಮಾನ್ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.