ಚಿಕ್ಕಮಗಳೂರು, ಜ 20 (DaijiworldNews/HR): ಹಿಂದಿನ ಕಾಲದವರು ದನಕ್ಕೆ ಕೊಡುತ್ತಿದ್ದ ಗೌರವವನ್ನು ಈಗಿನವರು ನಾಯಿಗೆ ಕೊಡುತ್ತಿದ್ದಾರೆ. ದನ ಸಾಕುವುದಕ್ಕಿಂತ ಹೆಚ್ಚಿನ ಬೆಲೆಯ ನಾಯಿ ಸಾಕಲು ಕೆಲವರು ವೆಚ್ಚ ಮಾಡುತ್ತಿರುವುದು ಶೋಚನೀಯ ಎಂದು ಸಿ.ಟಿ. ರವಿ ಆತಂಕ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಹಬ್ಬದ ಜ್ಞಾನ ವೈಭವ ಮೇಳೆದಲ್ಲಿ ಮಾತಾನಾಡಿದ ಅವರು, ಮನುಷ್ಯ ಪ್ರಕೃತಿಗೆ ಪೂರಕವಾಗಿ ಬದುಕಬೇಕು. ರಸಾಯನಿಕ ಬಳಕೆ ಕಡಿಮೆ ಮಾಡಿ ಮಿಶ್ರ ಬೆಳೆ ಬೆಳೆದರೆ ಮಣ್ಣು ಆರೋಗ್ಯವಾಗಿರುತ್ತದೆ. ಮನುಷ್ಯ ಸತ್ತರೆ ಮಣ್ಣಿಗೆ ಹೋಗುತ್ತಾನೆ. ಮಣ್ಣೇ ಸತ್ತರೆ ಮನುಷ್ಯ ಎಲ್ಲಿ ಹೋಗುತ್ತಾನೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಪಂಚಭೂತಗಳ ಜೊತೆ ಕೆಲಸ ಮಾಡುವ ರೈತ ಈ ದೇಶದ ನಿಜವಾದ ನಾಯಕ. ಪ್ರಸ್ತುತ ವಿದ್ಯಾವಂತ ಯುವಜನ ಕೃಷಿ ವಿಮುಖವಾಗಿರುವುದು ದೊಡ್ಡ ಸಮಸ್ಯೆಯಾಗಿದೆ. ಕೃಷಿ ಬೆಳವಣಿಗೆ ಮೂಲಕವೇ ಭಾರತ ವಿಶ್ವ ಗುರು ಆಗಬೇಕಿದೆ. ಹಿಂದಿನ ಕಾಲದವರು ದನಕ್ಕೆ ಕೊಡುತ್ತಿದ್ದ ಗೌರವವನ್ನು ಈಗಿನವರು ನಾಯಿಗೆ ಕೊಡುತ್ತಿದ್ದಾರೆ ಎಂದರು.