ಕೋಲ್ಕತ್ತಾ, ಜ 20 (DaijiworldNews/DB): ಬಿಜೆಪಿ ಜಾತ್ಯಾತೀತ ಪಕ್ಷವಲ್ಲ, ಅದು ಉಗ್ರಗಾಮಿ ಧಾರ್ಮಿಕ ಪಕ್ಷ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಜೈ ಪ್ರಕಾಶ್ ಮಜುಂದಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳ ಜನತೆ ಬಿಜೆಪಿಯಾಗಲೀ, ಆರೆಸ್ಸೆಸ್ ಪರವಾಗಿಯಾಗಲೀ ಇಲ್ಲ. ನರೇಂದ್ರ ಮೋದಿಯವರು ಇನ್ನೊಮ್ಮೆ ಪ್ರಧಾನಿಯಾಗುತ್ತಾರೆಯೋ, ಇಲ್ಲವೋ ಎಂಬುದನ್ನು ಮುಂದಿನ ಲೋಕಸಭಾ ಚುನಾವಣೆ ನಿರ್ಧರಿಸುತ್ತದೆ. ಬಿಜೆಪಿ ಜಾತ್ಯಾತೀತ ಪಕ್ಷವಲ್ಲ. ಉಗ್ರಗಾಮಿ ಧಾರ್ಮಿಕ ಪಕ್ಷವದು ಎಂದು ಹೇಳಿದ್ದಾರೆ.
ಇನ್ನು ಆರೆಸ್ಸೆಸ್ನ್ನು ನೇತಾಜಿ ಸುಬಾಶ್ಚಂದ್ರ ಬೋಸ್ ಇಷ್ಟಪಡುತ್ತಿರಲಿಲ್ಲ. ಆ ಸಂಘಟನೆಯನ್ನು ಕಂಡರೂ ಅವರಿಗೆ ಆಗುತ್ತಿರಲಿಲ್ಲ. ಅವರ ಮೇಲಿನ ಬಿಜೆಪಿಯ ಪ್ರೀತಿ ಬಾಹ್ಯ ನೋಟಕ್ಕಷ್ಟೇ ಹೊರತು ನಿಜವಾದ ಗೌರವದಿಂದ ಬರುವ ಪ್ರೀತಿ ಅದಲ್ಲ ಎಂದರು.