ನವದೆಹಲಿ, ಜ 20 (DaijiworldNews/HR): ಪಂಜಾಬ್ನ ದೇರಾಬಸ್ಸಿಯಲ್ಲಿನ 88 ವರ್ಷದ ವೃದ್ದರೊಬ್ಬರು ಕಳೆದ 35 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದು, ಇದೀಗ ರಾತ್ರೋರಾತ್ರಿ ಅವರ ಅದೃಷ್ಟ ಖುಲಾಯಿಸಿದೆ.
ಪಂಜಾಬ್ ರಾಜ್ಯ ಮಕರ ಸಂಕ್ರಾಂತಿ ಬಂಪರ್ ಲಾಟರಿ 2023 ಫಲಿತಾಂಶಗಳನ್ನು ಜನವರಿ 16 ರಂದು ಪ್ರಕಟಿಸಿದ್ದು, ಇದರಲ್ಲಿ ದ್ವಾರಕಾ ದಾಸ್ ಎಂಬ 88 ವರ್ಷದ ವ್ಯಕ್ತಿ ಮೊದಲ ಬಹುಮಾನವಾಗಿ 5 ಕೋಟಿ ರೂ. ಗೆದ್ದಿದ್ದಾರೆ.
ಇನ್ನು ಮಹಂತ್ ದ್ವಾರಕಾ ದಾಸ್ ಅವರು 1947 ರಲ್ಲಿ ತಮ್ಮ 13 ನೇ ವಯಸ್ಸಿನಲ್ಲಿ ತಮ್ಮ ಕುಟುಂಬದೊಂದಿಗೆ ಪಾಕಿಸ್ತಾನದಿಂದ ಪಂಜಾಬ್ಗೆ ವಲಸೆ ಬಂದಿದ್ದು, ದಾಸ್ ಕಳೆದ 35-40 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದರು. ಇದೀಗ ಲಾಟರಿಯಿಂದ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.