ಲಖನೌ, ಜ 20 (DaijiworldNews/DB): ವರುಣ್ ಗಾಂಧಿ ಬಿಜೆಪಿಗೆ ಗುಡ್ ಬೈ ಹೇಳಲಿದ್ದಾರೆ ಎಂಬ ವದಂತಿಗಳ ಮಧ್ಯೆಯೇ ತಮ್ಮ ಮುತ್ತಾತ ಜವಾಹರಲಾಲ್ ನೆಹರೂ ಅವರನ್ನು ವರುಣ್ ಗಾಂಧಿ ಹೊಗಳಿ ಮಾತನಾಡಿದ್ದಾರೆ.
ಪಿಲಿಭೀತ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವರುಣ್ ಗಾಂಧಿ, ರೈತರು, ಬಡವರ ಪರವಾಗಿ ನೆಹರೂ ಅವರು ಅಪಾರ ಕಾಳಜಿ ಹೊಂದಿದ್ದರು. ಐಷಾರಾಮಿ ಜೀವನಕ್ಕಾಗಿ ಹಾತೊರೆಯದೆ ಬಡವರ ಉದ್ದಾರಕ್ಕಾಗಿ ಅವರು ಪಣತೊಟ್ಟಿದ್ದರು ಎಂದರು.
ಬಡವರ ಮೇಲಿನ ಕಾಳಜಿಯಿಂದಾಗಿ ಅವರು ಸರ್ಕಾರಿ ವೇತನ, ಬಂಗಲೆ, ಭತ್ಯೆಗಳನ್ನೆಲ್ಲಾ ತ್ಯಾಗ ಮಾಡಿದ್ದರು. ಬಂಗಲೆ, ಕಾರು ಸೇರಿದಂತೆ ಯಾವುದೇ ವಸ್ತುಗಳನ್ನು ಸಾರ್ವಜನಿಕ ಹಣದಲ್ಲಿ ಅವರು ಪಡೆದುಕೊಂಡಿರಲಿಲ್ಲ. ಅವರ ಜೀವನಾದರ್ಶ ಪರಿಪಾಲನೆಯನ್ನು ನಾನೂ ಮಾಡುತ್ತಿದ್ದೇನೆ. ಸರ್ಕಾರದ ವೇತನ, ಬಂಗಲೆ ತಿರಸ್ಕರಿಸಿದ್ದೇನೆ ಎಂದು ಹೇಳಿದರು.