ನವದೆಹಲಿ, ಜ 20 (DaijiworldNews/HR): ಗಣರಾಜ್ಯೋತ್ಸವ ವೇಳೆ ದೆಹಲಿಯ ಕರ್ತವ್ಯ ಪಥದಲ್ಲಿ ಪಥಸಂಚಲನ ಮತ್ತು ಇತರ ಕಾರ್ಯಕ್ರಮಗಳ ವೀಕ್ಷಣೆಗೆ ಮೊದಲ ಸಾಲಿನ ಆಸನಗಳನ್ನು ಜನಸಾಮಾನ್ಯರಿಗೆ ಮೀಸಲಾಗಿ ಇರಿಸಲಾಗುತ್ತದೆ.
ತರಕಾರಿ ಮಾರುವವರು, ರಿಕ್ಷಾ ಚಾಲಕರು, ಸೆಂಟ್ರಲ್ ವಿಸ್ತಾ ಕಾಮಗಾರಿಯಲ್ಲಿ ಕೆಲಸ ಮಾಡಿದವರು ಮತ್ತು ಅವರ ಕುಟುಂಬ ವರ್ಗದವರಿಗೆ ಆದ್ಯತೆ ನೀಡಲಾಗುತ್ತದೆ.
ಇನ್ನು ಕಾರ್ಯಕ್ರಮದಲ್ಲಿ ಜನಸಾಮಾನ್ಯರು ಭಾಗಿ’ ಎಂಬ ಶೀರ್ಷಿಕೆಯ ಅಡಿ ಈ ವರ್ಷ ಗಣರಾಜ್ಯೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.