ಬೆಂಗಳೂರು, ಜ 20 (DaijiworldNews/HR): ಮಹಿಳೆಯೊಬ್ಬರು ತನ್ನ ಕಾರಿನ ಬಾನೆಟ್ ಮೇಲೆ ಸುಮಾರು ಒಂದು ಕಿಲೋಮೀಟರ್ ವರೆಗೆ ವ್ಯಕ್ತಿಯನ್ನು ಎಳೆದೊಯ್ದಿರುವ ಘಟನೆ ಬೆಂಗಳೂರಿನ ಜ್ಞಾನ ಭಾರತಿ ನಗರದಲ್ಲಿ ನಡೆದ ವಾಗ್ವಾದದ ನಂತರ ಬೆಳಕಿಗೆ ಬಂದಿದೆ.
ಜ್ಞಾನ ಭಾರತಿ ನಗರ ಪ್ರದೇಶದಲ್ಲಿ ಎರಡು ಕಾರುಗಳು ಒಂದಕ್ಕೊಂದು ಢಿಕ್ಕಿ ಹೊಡೆದಿದ್ದು,ಒಂದು ಕಾರನ್ನು ಪ್ರಿಯಾಂಕಾ ಎಂಬ ಮಹಿಳೆ ಓಡಿಸುತ್ತಿದ್ದಳು. ದರ್ಶನ್ ಎಂದು ಗುರುತಿಸಿರುವ ವ್ಯಕ್ತಿ ಇನ್ನೊಂದು ಕಾರನ್ನು ಚಲಾಯಿಸುತ್ತಿದ್ದರು. ಕಾರು ಢಿಕ್ಕಿ ಹೊಡೆದ ಕೂಡಲೇ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು,ದರ್ಶನ್ ತನ್ನ ಕಾರನ್ನು ನಿಲ್ಲಿಸಲು ಹೋದಾಗ, ಪ್ರಿಯಾಂಕಾ ತನ್ನ ವಾಹನದ ವೇಗ ಹೆಚ್ಚಿಸಿದ್ದು, ದರ್ಶನ್ ಕಾರಿನ ಬಾನೆಟ್ ಮೇಲಿದ್ದು, ಪ್ರಿಯಾಂಕಾ ಸುಮಾರು ಒಂದು ಕಿಲೋಮೀಟರ್ ನಷ್ಟು ದೂರ ಕಾರು ಓಡಿಸಿದ್ದಾರೆ.
ಇನ್ನು ಪ್ರಿಯಾಂಕಾ ಕಾರು ನಿಲ್ಲಿಸಿದ ನಂತರ, ದರ್ಶನ್ ಮತ್ತು ಅವರ ಸ್ನೇಹಿತರು ಕಾರಿನ ಭಾಗಗಳನ್ನು ಒಡೆದರು, ಎರಡೂ ಕಡೆಯವರು ಪರಸ್ಪರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.