ತುಮಕೂರು, ಜ 21( DaijiworldNews/MS): ರಾಜ್ಯದಲ್ಲಿ ಇನ್ನುಮುಂದೆ ಯಾವುದೇ ಪುಣ್ಯ ಸ್ಮರಣೆ ಆಚರಣೆಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ತುಮಕೂರಿನಲ್ಲಿ ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 4ನೇ ಪುಣ್ಯ ಸಂಸ್ಮರಣೋತ್ಸವ ಸಮಾರಂಭ ಮಾತನಾಡಿದ ಅವರು ಪುಣ್ಯ ಪುರುಷರ ದಿನಾಚರಣೆಗಳಿಗೆ ಆ ದಿನ ಅವರ ಸ್ಮರಣೆ ಮಾಡಲಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಅಂಥಹ ದಿನಾಚರಣೆಗಳಿಗೆ ಇನ್ನು ರಜೆಯನ್ನು ನೀಡದಿರಲು ಸರ್ಕಾರ ತೀರ್ಮಾನಿಸಿದೆ. ಅದು ಸ್ವಾಮೀಜಿಗಳೇ ಇರಬಹುದು ಅಥವಾ ಬೇರೆ ಸಮಾಜ ಸುಧಾರಕರು ಇರಬಹುದು; ಸರ್ಕಾರಿ ರಜೆ ಮಾತ್ರ ಇರುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.