ನವದೆಹಲಿ, ಜ 21 (DaijiworldNews/HR): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ನ ಹಳೆಯ ಕಟ್ಟಡದಲ್ಲಿಯೇ ಉಭಯ ಸದನಗಳ ಜಂಟಿ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ತಿಳಿಸಿದ್ದಾರೆ.
ಬಜೆಟ್ನ ಅಧಿವೇಶನ ಹೊಸದಾಗಿ ನಿರ್ಮಿಸಲಾದ ಸಂಸತ್ ಭವನದಲ್ಲಿ ನಡೆಯಲಿದೆ ಎಂಬ ಊಹಾಪೊಹವನ್ನು ಸ್ಪೀಕರ್ ತಳ್ಳಿ ಹಾಕಲಿದ್ದಾರೆ ಎನ್ನಲಾಗಿದೆ.
ಇನ್ನು ಸಂಸತ್ನ ಬಜೆಟ್ ಅಪೊವೇಶನ ಜನವರಿ 31ರಂದು ಪ್ರಾರಂಭವಾಗಿ ಫೆಬ್ರವರಿ 13 ರವರೆಗೆ ನಡೆಯಲಿದ್ದು, ಬಳಿಕ ಮಾರ್ಚ್ 13 ರಂದು ಮತ್ತೆ ಸಂಸತ್ ಸಮಾವೇಶಗೊಂಡು ಏಪ್ರಿಲ್ 6 ರವರೆಗೆ ನಡೆಯುವ ವೇಳಾ ಪಟ್ಟಿ ನಿಗದಿಯಾಗಿದೆ.
ಬಜೆಟ್ ಅಪೊವೇಶನ ನೂತನವಾಗಿ ನಿರ್ಮಿಸಲಾಗಿರುವ ಸಂಸತ್ನ ಹೊಸ ಕಟ್ಟಡ ಸೆಂಟ್ರಲ್ ವಿಸ್ಟಾದಲ್ಲಿ ನಡೆಯಲಿದೆ ಎಂದು ನಿನ್ನೆ ಟ್ರೆಂಡ್ ಮಾಡಲಾಗಿತ್ತು. ಇದಕ್ಕೆ ಟ್ವೀಟ್ ಮೂಲಕ ಸ್ಪೀಕರ್ ಸ್ಪಷ್ಟನೆ ನೀಡಿದ್ದಾರೆ.