ಕತಿಹಾರ್, ಜ 21 (DaijiworldNews/HR): ಬಿಹಾರದಲ್ಲಿ 20 ದಿನಗಳ ಒಳಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಶನಿವಾರ ಕಲ್ಲು ತೂರಾಟ ನಡೆದ ಎರಡನೇ ಘಟನೆ ನಡೆದಿದ್ದು, ಈ ಬಗ್ಗೆ ರೈಲ್ವೆ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.
ಘಟನೆಯಲ್ಲಿ ಸಿ6 ಸಂಖ್ಯೆಯ ಬೋಗಿಯ ಕಿಟಕಿ ಗಾಜುಗಳು ಜಖಂಗೊಂಡಿದ್ದು, ರೈಲಿನ ಕಾರ್ಯಾಚರಣೆಗೆ ಅಡ್ಡಿಯುಂಟಾಯಿತು.
ಇನ್ನು ಕತಿಹಾರ್ ಜಿಲ್ಲೆಯ ಬಲರಾಮ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಲ್ಲು ತೂರಾಟದಿಂದ ಯಾವುದೇ ವ್ಯಕ್ತಿಗೆ ಗಾಯಗಳು ಸಂಭವಿಸಿಲ್ಲ.