ನವದೆಹಲಿ, ಜ 21 (DaijiworldNews/DB): ಕೆಲವು ಗುಂಪುಗಾರಿಕೆಗಳು ಪ್ರತಿ ರಾಜಕೀಯ ಪಕ್ಷದಲ್ಲಿಯೂ ಸಾಮಾನ್ಯ. ಆದರೆ ಸಾಮೂಹಿಕ ಗುರಿಯನ್ನಷ್ಟೇ ನಾಯಕರು ನೋಡಬೇಕು ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ನಡುವೆ ನಡೆಯುತ್ತಿರುವ ಅಧಿಕಾರದ ಕಿತ್ತಾಟದ ನಡುವೆಯೇ ಶನಿವಾರ ತರೂರ್ ಈ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, ಯಾವುದೇ ಪಕ್ಷದಲ್ಲಿಯೂ ಭಿನ್ನಾಭಿಪ್ರಾಯಗಳು ಇರಬಹುದು. ಬಿಜೆಪಿಯಲ್ಲಿಯೂ ಇದೆ. ಆದರೆ ಪಕ್ಷದ ವಿಷಯ ಬಂದಾಗ ಭಿನ್ನಾಭಿಪ್ರಾಯಗಳನ್ನು ದೊಡ್ಡದಾಗಿ ಮಾಡದೇ ಸಾಮೂಹಿಕ ಗುರಿಯನ್ನಷ್ಟೇ ನೋಡಬೇಕು ಎಂದು ಪ್ರತಿಪಾದಿಸಿದರು.
ಸಿದ್ದಾಂತಕ್ಕಾಗಿ ಹೋರಾಡುತ್ತಿದ್ದರೆ, ಪಕ್ಷ ಹೇಳಿದಂತೆ ಇರಬೇಕು. ಬಣಗಳು ಉದ್ಬವಿಸುವುದು ಸಾಮಾನ್ಯ. ಆದರೆ ನಾವು ಬಿಜೆಪಿ ವಿರುದ್ದ ಹೋರಾಡಿ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಬೇಕು ಎಂದರು.