ನವದೆಹಲಿ, ಜ 21 (DaijiworldNews/DB): ಭಾರತೀಯ ಕ್ರಿಕೆಟ್ ತಂಡದ ವೇಗಿ ಉಮೇಶ್ ಯಾದವ್ ಅವರಿಗೆ ಮ್ಯಾನೇಜರ್ ಆಗಿದ್ದ ಸ್ನೇಹಿತನೇ 44 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ಈ ಸಂಬಂಧ ವಂಚನೆ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಫ್ಲಾಟ್ ಕೊಡಿಸುವ ನೆಪದಲ್ಲಿ ಉಮೇಶ್ ಯಾದವ್ ಅವರ ಮ್ಯಾನೇಜರ್ ಆಗಿದ್ದ ಶೈಲೇಶ್ ಠಾಕ್ರೆ ವಂದನೆ ಎಸಗಿದ್ದಾರೆ ಎಂದು ದೂರು ನೀಡಲಾಗಿದೆ. ಆದರೆ ಆರೋಪಿಯ ಬಂಧನ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
2014ರಿಂದ ಯಾದವ್ ಅವರ ಮ್ಯಾನೇಜರ್ ಆಗಿದ್ದ ಠಾಕ್ರೆ, ಉಮೇಶ್ ಯಾದವ್ ಅವರ ಹಣಕಾಸಿನ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ನಾಗ್ಪುರದಲ್ಲಿ ಭೂಮಿ ಖರೀದಿ ವಿಚಾರವಾಗಿ ಯಾದವ್ ಅವರು ಠಾಕ್ರೆಯಲ್ಲಿ ಹೇಳಿದಾಗ ಬಂಜರು ಪ್ರದೇಶದಲ್ಲಿ ಫ್ಲಾಟ್ ಮಾಡಿರುವುದಾಗಿ ಹೇಳಿ 44 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದರು. ಬಳಿಕ ತನ್ನ ಹೆಸರಿನಲ್ಲಿಯೇ ಫ್ಲಾಟ್ ಖರೀದಿಸಿದ್ದಾನೆ.
ವಂಚನೆ ಅರಿತ ಯಾದವ್ ತಮ್ಮ ಹೆಸರಿಗೆ ಫ್ಲಾಟ್ ವರ್ಗಾಯಿಸುವಂತೆ ಕೇಳಿದ್ದು, ಆತ ನಿರಾಕರಿಸಿದ್ದಾನೆ. ಅಲ್ಲದೆ ಹಣ ಹಿಂತಿರುಗಿಸುವುದಕ್ಕೂ ಒಪ್ಪಿಲ್ಲ. ಹೀಗಾಗಿ ಕೊರಾಡಿಯಲ್ಲಿ ಯಾದವ್ ಪ್ರಕರಣ ದಾಖಲಿಸಿದ್ದಾರೆ.