ಭೋಪಾಲ್, ಜ 22 (DaijiworldNews/HR): ಸೃಷ್ಟಿಯ ಬೃಹತ್ ಜೀವಿಗಳೆಂದು ಕರೆಸಿಕೊಂಡಿರುವ ಡೈನೋಸಾರ್ ಮತ್ತು ಟೈಟನೊಸಾರ್ಗಳ 256 ಮೊಟ್ಟೆಗಳು ಮಧ್ಯಪ್ರದೇಶದ ಧರ್ ಜಿಲ್ಲೆಯ ಬಾಘ ಮತ್ತು ಕುಕ್ಷಿ ಪ್ರದೇಶದಲ್ಲಿರುವ ನರ್ಮದಾ ನದೀ ಕಣಿವೆಯಲ್ಲಿ ಪತ್ತೆಯಾಗಿದೆ.
ದೆಹಲಿ ವಿವಿ ಮತ್ತು ಐಐಎಸ್ಇಆರ್ನ ಕೋಲ್ಕತ-ಭೋಪಾಲ್ ವಿಜ್ಞಾನಿಗಳು 2017ರಿಂದ 2020ರವರೆಗೆ ನಡೆಸಿದ ಸಂಶೋಧನೆಯಲ್ಲಿ ಈ ಕುತೂಹಲಕಾರಿ ಸಂಗತಿಗಳು ಪತ್ತೆಯಾಗಿವೆ.
ಇನ್ನು ಟೆಥಿಸ್ ಸಮುದ್ರ ಮತ್ತು ನರ್ಮದಾ ನದಿಗಳು ಸಂಗಮಿಸುವ ಪ್ರದೇಶದಲ್ಲಿ ಡೈನೋಸಾರ್ಗಳ ಮೊಟ್ಟೆಗಳು ಕಂಡುಬಂದಿದದು, ಒಂದು ಕಾಲದಲ್ಲಿ ಪೂರ್ವ ಆಫ್ರಿಕಾದ ದ್ವೀಪಗಳ ರಾಷ್ಟ್ರ ಸೀಶೆಲ್ಸ್ ಭಾರತಕ್ಕೆ ಅಂಟಿಕೊಂಡಿತ್ತು. ಕಾಲಕ್ರಮೇಣ ಅದು ದೂರಸರಿಯಿತು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.