ಅಸ್ಸಾಂ, ಜ 22 (DaijiworldNews/HR): ದಿಬ್ರುಗಡ್ ಜಿಲ್ಲೆಯಲ್ಲಿ 11 ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಕಂಡುಬಂದಿರುವ ಅಪರೂಪದಲ್ಲಿ ಅಪರೂಪ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಅಪೇಕ್ಷಾ ಆಸ್ಪತ್ರೆಯಲ್ಲಿ ಈ ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ವೈದ್ಯರು 2 ಕೆಜಿ ತೂಕದ ಭ್ರೂಣವನ್ನು ಹೊರ ತೆಗೆದಿದ್ದಾರೆ.
ಇನ್ನು ಸದ್ಯ ಮಗು ಆರೋಗ್ಯವಾಗಿದ್ದು, ಅರುಣಾಚಲ ಪ್ರದೇಶದ ಸಾಂಗ್ಲಾಂಗ್ ಜಿಲ್ಲೆಯ ಮಗು ಇದು ಎಂದು ಹೇಳಲಾಗಿದೆ.
ಐದು ಲಕ್ಷ ಮಕ್ಕಳ ಪೈಕಿ ಒಂದೊಂದು ಮಗುವಿಗೆ ಈ ರೀತಿ ಆಗಲಿದೆಯಂತೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಫೀಟಸ್-ಇನ್-ಫೀಟು ಎಂದು ಕರೆಯುತ್ತಾರೆ ಎನ್ನಲಾಗಿದೆ.