ಪಾಟ್ನಾ, ಜ 22 (DaijiworldNews/HR): ಬಿಹಾರದಲ್ಲಿ ಕಾರೊಂದು ವಯೋವೃದ್ಧರಿಗೆ ಡಿಕ್ಕಿ ಹೊಡೆದಿದ್ದಲ್ಲದೆ, ಕಾರಿನ ಬಾನೆಟ್ಗೆ ಸಿಕ್ಕಿಹಾಕಿಕೊಂಡ ವೃದ್ದನನ್ನು ಎಂಟು ಕಿಲೋಮೀಟರ್ ದೂರ ಎಳೆದೊಯ್ದಿರುವ ಘಟನೆ ನಡೆದಿದೆ.
ಮೃತಪಟ್ಟವರನ್ನು ಜಿಲ್ಲೆಯ ಕೋಟ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಬಂಗ್ರಾ ಗ್ರಾಮದ ನಿವಾಸಿ ಶಂಕರ್ ಚೌಧೂರ್(70) ಎಂದು ಗುರುತಿಸಲಾಗಿದೆ.
ಚಾಲಕ ಹಠಾತ್ ಬ್ರೇಕ್ಗಳನ್ನು ಹೊಡೆದ ನಂತರ ವೃದ್ದ ರಸ್ತೆಯ ಮೇಲೆ ಬಿದ್ದಿದ್ದು, ಬಳಿಕ ವೃದ್ದನ ಮೇಲೆ ಕಾರನ್ನು ಓಡಿಸಿ ಕೊಂದಿರುವ ಘಟನೆ ನಡೆದಿದೆ.
ಇನ್ನು ಸೈಕಲ್ ಸವಾರ ಶಂಕರ್ ಚೌಧೂರ್ ಅವರು ಬಾಂಗ್ರಾ ಚೌಕ್ ಬಳಿ ಎನ್ಎಚ್ 27 ಅನ್ನು ದಾಟುತ್ತಿದ್ದಾಗ ಗೋಪಾಲ್ ಗಂಜ್ ಪಟ್ಟಣದಿಂದ ವೇಗವಾಗಿ ಬಂದ ಕಾರು, ಸೈಕಲ್ ಗೆ ಡಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಚೌಧೂರ್ ಅವರು ಕಾರಿನ ಬಾನೆಟ್ ಮೇಲೆ ಎಸೆಯಲ್ಪಟ್ಟರು. ಚೌಧೂರಿ ಅವರು ನಂತರ ವೈಪರ್ ಅನ್ನು ಹಿಡಿದು ಕಾರನ್ನು ನಿಲ್ಲಿಸುವಂತೆ ಕೂಗುತ್ತಾ ಮನವಿ ಮಾಡಿದರು ಎಂದು ವರದಿಯಾಗಿದೆ.