ಚಿಕ್ಕಮಗಳೂರು, ಜ 22 (DaijiworldNews/DB): ಸಿದ್ದರಾಮಯ್ಯ ಅವರನ್ನು ಜನ ಸಿದ್ರಾಮುಲ್ಲಾ ಖಾನ್ ಎಂದು ಕರೆಯುತ್ತಾರೆ. ಆದರೆ ನಾನು ಸುಳ್ಳು ರಾಮಯ್ಯ ಎಂಬುದಾಗಿ ಹೆಸರಿಟ್ಟಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಸುಳ್ಳುರಾಮಯ್ಯ ಎಂಬ ಹೆಸರೇ ಅವರಿಗೆ ಸೂಕ್ತವಾಗುತ್ತದೆ. ಹೀಗಾಗಿ ಅದೇ ಹೆಸರನ್ನು ನಾನು ಅವರಿಗೆ ಇಡುತ್ತಿದ್ದೇನೆ ಎಂದರು.
ಸಾವರ್ಕರ್ರನ್ನು ಹಿಟ್ಲರ್ನಿಂದ ಪ್ರಭಾವಿತರಾದವರು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಅವರ ಮಾತಿನ ಧಾಟಿ ನೋಡಿದರೆ ಅವರ ಮಾನಸಿಕ ಆರೋಗ್ಯದ ಬಗ್ಗೆಯೇ ಸಂಶಯ ಉಂಟಾಗುತ್ತದೆ. ಇಂದಿರಾಗಾಂಧಿಯವರ ಕಾಲದಲ್ಲಿ ಸಾವರ್ಕರ್ ಹೆಸರಿನಲ್ಲಿ ಅಂಚೆಚೀಟಿ ತಂದಿದ್ದರು ಎಂದವರು ತಿಳಿಸಿದರು.
ಮೈಸೂರು ಸಂಸ್ಥಾನ ಮೀಸಲಾತಿ ಕೊಟ್ಟು ಅಭಿವೃದ್ದಿಗೆ ಯೋಜಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ನ್ನು ನೆನಪಿಸಿಕೊಳ್ಳದ ಅವರು, ಕನ್ನಡದ ಬದಲಿಗೆ ಪರ್ಷಿಯನ್ ಭಾಷೆಯನ್ನು ಹೇರಿದ ಟಿಪ್ಪುವನ್ನು ಸ್ಮರಿಸುತ್ತಾರೆ. ಸಿದ್ದರಾಮಯ್ಯನವರ ಈ ರೀತಿನೀತಿಗಳನ್ನು ನೋಡಿದರೆ ಏನನಿಸುತ್ತದೆ ನೀವೇ ತೀರ್ಮಾನಿಸಿ ಎಂದರು.
ಒಂದು ವೇಳೆ ಜಿನ್ನಾ ಬದುಕಿದ್ದರೆ ಸಿದ್ದರಾಮಯ್ಯನವರನ್ನು ನೋಡಿ ನನಗೆ ಕಟ್ಟರ್ ಪ್ರತಿಸ್ಪರ್ಧಿ ಇದ್ದಾರೆಂದೇ ಜಿನ್ನಾ ಭಾವಿಸುತ್ತಿದ್ದರು. ಜಿನ್ನಾ ಮೀರಿಸುವ ನಡವಳಿಕೆ ಸಿದ್ದರಾಮಯ್ಯನವರದ್ದು ಎಂದು ಹರಿಹಾಯ್ದರು.