ತಿ. ನರಸೀಪುರ, ಜ 23 (DaijiworldNews/HR): 11 ವರ್ಷದ ಬಾಲಕನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ತಿ. ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಮೂರು ದಿನಗಳಲ್ಲೇ ಇಬ್ಬರನ್ನು ಚಿರತೆ ಕೊಂದು ಹಾಕಿದ್ದು, ಜನರು ಆತಂಕದಲ್ಲಿ ಜೀವನ ಮಾಡುವಂತಾಗಿದೆ.
ಚಿರತೆ ದಾಳಿಗೆ ಇದು ನಾಲ್ಕನೇ ಸಾವಾಗಿದ್ದು, ಶುಕ್ರವಾರವಷ್ಟೇ ಕನ್ನಾಯಕನಹಳ್ಳಿ ಗ್ರಾಮದ ಸಿದ್ದಮ್ಮ ಎಂಬವರನ್ನು ಚಿರತೆ ಕೊಂದಿತ್ತು. ಈ ಹಿಂದೆ ಉಕ್ಕಲಗೆರೆ ಮಂಜುನಾಥ, ಎಂ. ಕೆಬ್ಬೆಹುಂಡಿಯ ಮೇಘನಾ ಎಂಬಾಕೆಯನ್ನು ಚಿರತೆ ದಾಳಿ ಮಾಡಿ ಕೊಂದಿದ್ದು, ಇದೀಗ ಬಾಲಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.
ಶನಿವಾರ ತಡರಾತ್ರಿ ಬಾಲಕ ಜಯಂತ್ (11) ನಾಪತ್ತೆಯಾಗಿದ್ದು, ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಭಾನುವಾರ ಗ್ರಾಮದಿಂದ ಒಂದು ಕಿ.ಮೀ. ದೂರವಿರುವ ಪೊದೆಯೊಂದಲ್ಲಿ ಮೃತದೇಹ ಪತ್ತೆಯಾಗಿದೆ. ಬಾಲಕನ ಮೃತದೇಹದ ಅರ್ಧ ಭಾಗ ಮಾತ್ರ ದೊರೆತಿದ್ದು, ತಲೆ ಭಾಗವನ್ನು ಚಿರತೆ ತಿಂದಿರಬಹುದೆಂದು ಅನುಮಾನ ಹುಟ್ಟುಕೊಂಡಿದೆ.
ಇನ್ನು ಈ ಚಿರತೆ ನರಭಕ್ಷಕ ಆಗಿದ್ದು, ಕಾರ್ಯಾಚರಣೆ ವೇಳೆ ಕಂಡಲ್ಲಿ ಗುಂಡಿಕ್ಕಲು ಅರಣ್ಯ ಇಲಾಖೆ ಆದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ.