ಕೋಲಾರ, ಜ 23( DaijiworldNews/MS):ಕೋಲಾರದಿಂದ ಸ್ಪರ್ಧಿಸುವ ಘೋಷಣೆ ಮಾಡಿದ ಬಳಿಕ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಅವರ ಶಕ್ತಿ ಪ್ರದರ್ಶನವಾಗಲಿದೆ. ಸಿದ್ದು ಸ್ಪರ್ಧೆ ಹಿನ್ನೆಲೆಯಲ್ಲಿ ಕೋಲಾರ ಮಹತ್ವ ಪಡೆದಿದೆ.
ಕೋಲಾರ ಹೊರ ವಲಯದ ಟಮಕ ಬಳಿ ನಡೆಯುವ ಪ್ರಜಾಧ್ವನಿ ಸಮಾವೇಶದಲ್ಲಿ ಡಿಕೆಶಿ ಸೇರಿ ಹಲವು ನಾಯಕರು ಭಾಗವಹಿಸುತ್ತಿದ್ದಾರೆ. ಸಮಾವೇಶಕ್ಕೆ 60 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷಯಿದೆ. ಜಿಲ್ಲೆಯ 6 ತಾಲೂಕುಗಳಿಂದ ತಲಾ 10 ಸಾವಿರ ಜನ ಬರುವ ಸಾಧ್ಯತೆಗಳಿವೆ. ಕಾಂಗ್ರೆಸ್ ಕೋಲಾರದ ಐದು ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿದೆ.
ಸಿದ್ದು ಕೋಲಾರ ಸ್ಪರ್ಧೆಗೆ ಇಲ್ಲಿನ ಜನ ಯಾವ ರೀತಿ ರೆಸ್ಪಾನ್ಸ್ ಮಾಡುತ್ತಾರೆ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಲಿದೆ.