ನವದೆಹಲಿ, ಜ 23( DaijiworldNews/MS): ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ದೇಶದ 11 ಮಕ್ಕಳಿಗೆ ತಮ್ಮ ಅಸಾಧಾರಣ ಸಾಧನೆಗಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ.
11 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಂದ 6 ಗಂಡು ಮತ್ತು 5 ಹೆಣ್ಣು ಮಕ್ಕಳು ಆಯ್ಕೆಯಾಗಿದ್ದು, ಅವರಿಗೆ ಪದಕ, ತಲಾ 1 ಲಕ್ಷ ನಗದು, ಪ್ರಮಾಣ ಪತ್ರ ನೀಡಲಾಗುವುದು. ಈ ಮಕ್ಕಳು ಕಲೆ, ಸಂಸ್ಕೃತಿ, ಶೌರ್ಯ, ಅವಿಷ್ಕಾರ, ಕ್ರೀಡೆಯಲ್ಲಿ ಅಪಾರ ಸಾಧನೆ ಮಾಡಿದ್ದಾರೆ.
ನಾಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವೆ ಸ್ಮೃತಿ ಇರಾನಿ ಅವರು ಬಾಲ ಪುರಸ್ಕಾರ್ 2023 ವಿಜೇತರೊಂದಿಗೆ ಸಂವಾದ ನಡೆಸಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ವಿಜ್ಞಾನ ಭವನದಲ್ಲಿ ನಡೆಯಲಿದೆ.
ಭಾರತ ಸರ್ಕಾರವು ಮಕ್ಕಳಿಗೆ ಅವರ ಅಸಾಧಾರಣ ಸಾಧನೆಗಳಿಗಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡುತ್ತದೆ.