ಧಾರವಾಡ, ಜ 23( DaijiworldNews/MS): ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ಹೋದ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾಜ.28ರಂದು ಧಾರವಾಡಕ್ಕೆ ಭೇಟಿ ಕೊಡುತ್ತಿದ್ದಾರೆ. ಧಾರವಾಡದಲ್ಲಿ ಸ್ಥಾಪಿಸಲಿರುವ ರಾಷ್ಟ್ರೀಯ ವಿಧಿ-ವಿಜ್ಞಾನ ಶಾಸ್ತ್ರ ವಿವಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಶಾ ಕಳೆದ ಒಂದು ತಿಂಗಳಲ್ಲಿ ಕರ್ನಾಟಕಕ್ಕೆ ಆಗಮಿಸುತ್ತಿರುವುದು 3ನೇ ಬಾರಿ.
ಶಾ ಭೇಟಿ ಬಗ್ಗೆ ನಿನ್ನೆ ಕೆಂದ್ರ ಸಚಿವ ಪ್ರಹ್ಲಾದ್ ಸ್ಥಳ ಪರಿಶೀಲನೆ ನಡೆಸಿದ್ದು ಗುಜರಾತ್ನ ವಿಧಿ ವಿಜ್ಞಾನ ಶಾಸ್ತ್ರದ 9ನೇ ಕ್ಯಾಂಪಸ್ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ ಇದ ರೊಂದಿಗೆ ದಕ್ಷಿಣ ಭಾರತದಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ, ಗುಣಮಟ್ಟದ ವಿವಿ ಕ್ಯಾಂಪಸ್ ಸ್ಥಾಪಿತವಾದಂತಾಗುತ್ತದೆ ಎಂದು ಹೇಳಿದ್ದಾರೆ
ರಾಷ್ಟ್ರೀಯ ವಿಧಿವಿಜ್ಞಾನ ವಿವಿ ಸ್ಥಾಪನೆಯಿಂದ ಈ ಭಾಗದ ವಿವಿಧ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿನ ಅಪರಾಧ ಶಾಸ್ತ್ರ, ಮಾನವ ಶಾಸ್ತ್ರ, ಲೈಫ್ ಸೈನ್ಸ್, ಜೆನೆಟಿಕ್ಸ್, ಬಯೋಟೆಕ್ನಾಲಜಿ, ಪ್ರಾಣಿ ಶಾಸ್ತ್ರ ಸೇರದಂತೆ ವಿವಿಧ ವಿಷಯಗಳ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಅನುಕೂಲವಾಗಲಿದೆ. ಡಿಎನ್ಎ ತಾಂತ್ರಿಕತೆ, ಸೈಬರ್ ಅಪರಾಧಗಳ ತನಿಖೆಯಲ್ಲಿ ಆಗುವ ವಿಳಂಬ ತಪ್ಪಿಸಬಹುದು ಎಂದು ಮಾಹಿತಿ ನೀಡಿದ್ದಾರೆ