ಮಂಡ್ಯ, ಜ 23( DaijiworldNews/MS): ಶ್ರೀರಾಮನ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದ ಸಾಹಿತಿ ಭಗವಾನ್ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯ ಹೆಚ್ಚಾಗಿದ್ದು, ಹಿಂದೂಪರ ಸಂಘಟನೆಗಳು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ದೂರು ದಾಖಲಿಸಿದ್ದಾರೆ.
ಇಡೀ ದೇಶ ಭಕ್ತಿಯಿಂದ ಕಾಣುವ ಶ್ರೀರಾಮ, ಸೀತಾಮಾತೆ ಬಗ್ಗೆ ಭಗವಾನ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಸಮಾಜದಲ್ಲಿ ಸ್ವಾಸ್ಥ್ಯ, ಶಾಂತಿ ಕೆಡಿಸುವ ಉದ್ದೇಶದಿಂದಲೇ ಚುನಾವಣೆಯ ಸಮಯದಲ್ಲೇ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಪದೇ ಪದೇ ಇಂಥ ಹೇಳಿಕೆ ನೀಡುವ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಕೋರಲಾಗಿದೆ.
ಸೀತೆಗೆ ಹೆಂಡ ಕುಡಿಸಿ ರಾಮನೂ ಕುಡಿಯುತ್ತಿದ್ದ ಭಗವಂತ ರಾಮ ಆದರ್ಶ ಅಲ್ಲ, ಏಕೆಂದರೆ ತನ್ನ ಹೆಂಡತಿಯನ್ನು ಕಾಡಿಗೆ ಕಳುಹಿಸಿ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಮತ್ತು ಮರದ ಕೆಳಗೆ ತಪಸ್ಸಿಗೆ ಕುಳಿತಿದ್ದ ಶೂದ್ರನ ತಲೆಯನ್ನೂ ಕತ್ತರಿಸಿದ್ದ ಎಂದು ಭಗವಾನ್ ಇತ್ತೀಚೆಗೆ ಹೇಳಿದ್ದರು.