ಬೆಳಗಾವಿ, ಜ 23( DaijiworldNews/MS):ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಪಿಹೆಚ್ ಡಿ ಮಾಡಿದ್ದು, ಭ್ರಷ್ಟಾಚಾರ ಅಂದರೆ ಕಾಂಗ್ರೆಸ್ ಎನ್ನುವಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಬೆಂಗಳೂರಿನ ರಾಜಕಾಲುವೆ ಒತ್ತುವರಿ, ಸೈಟ್ ಅಕ್ರಮ ಸೇರಿ ಹಲವು ಹಗರಣಗಳಾಗಿವೆ. ಹಗರಣ ಮುಚ್ಚಿ ಹಾಕೋಕೆ ಈಗ ಧರಣಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಭ್ರಷ್ಟಾಚಾರದ ಗಂಗೋತ್ರಿ ಅಂದ್ರೆ ಅದು ಕಾಂಗ್ರೆಸ್, ಈಗ ಸೋಗಲಾಡಿತನ ಮಾಡುತ್ತಿದೆ. ಲೋಕಾಯಕ್ತ ಸಂಸ್ಥೆಯನ್ನೇ ಮುಚ್ಚಿ ಭ್ರಷ್ಟಾಚಾರಕ್ಕೆ ದೊಡ್ದ ಕೊಡುಗೆ ನೀಡಿದವರು. ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ . ತಾವು ಮಾಡಿದ ಪಾಪದ ಕೆಲಸ ಮುಚ್ಚಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ. ಒಂದು ಕಡೆ ಸೇರಿದರೆ ಜನ ಬರಲ್ಲ ಎಂಬ ಕಾರಣಕ್ಕೆ ೩೦೦ ಕಡೆ ಮಾಡಿದ್ದಾರೆ ಎಂದು ವ್ಯಂಗವಾಡಿದ್ದಾರೆ.