ಮುಂಬೈ, ಜ 23( DaijiworldNews/MS): ಐದನೇ ಜಲಾಂತರ್ಗಾಮಿ ನೌಕೆ ’ಐಎನ್ಎಸ್ ವಾಗಿರ್ ’ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದು, ನೌಕಾಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.
ಸೋಮವಾರ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಮುಂಬೈನ ನೌಕಾ ನೆಲೆಯಲ್ಲಿ ವಾಗೀರ್ ಗೆ ಚಾಲನೆ ನೀಡಿದರು.
ಐಎನ್ಎಸ್ ವಾಗಿರ್ ಅನ್ನು ಫ್ರಾನ್ಸ್ ತಂತ್ರಜ್ಞಾನದೊಂದಿಗೆ ಮಜಗಾನ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದೆ. ಸುಧಾರಿತ ತಂತ್ರಜ್ಞಾನದ ಐಎನ್ಎಸ್ ವಾಗಿರ್, ಶತ್ರುಗಳ ದಾಳಿ ತಡೆಯಲು, ಸಾಗರದಲ್ಲಿ ಭಾರತದ ರಕ್ಷಣೆಯ ಬಲವರ್ಧನೆಗೆ, ಗುಪ್ತಚರ ಹಾಗೂ ಕಣ್ಗಾವಲು ವಹಿಸಲು ನೆರವಾಗಲಿದೆ. ಜಗತ್ತಿನ ಅತ್ಯುತ್ತಮ ಸೆನ್ಸಾರ್ಗಳನ್ನು ಇದು ಒಳಗೊಂಡಿವೆ.
ನವೆಂಬರ್ 12, 2020 ರಂದು ಭಾರತೀಯ ನೌಕಾಪಡೆಯು ಇದಕ್ಕೆ 'ವಾಗಿರ್' ಎಂದು ಹೆಸರಿಸಿತು. ವಾಗಿರ್ ಅಂದರೆ 'ಸ್ಯಾಂಡ್ ಶಾರ್ಕ್' ಎಂದಾಗಿದ್ದು, ರಹಸ್ಯ, ನಿರ್ಭಯತೆಯನ್ನು ಪ್ರತಿಬಿಂಬಿಸುತ್ತದೆ.