ಮಹಾರಾಷ್ಟ್ರ, ಜ 23 (DaijiworldNews/HR): ಡಾ, ಬಿ ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಅಘಾಡಿ (ವಿಬಿಎ) ಪಕ್ಷದೊಂದಿಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದಾರೆ.
ಮೈತ್ರಿಯನ್ನು ಘೋಷಿಸಿದ ಉದ್ಧವ್ ಠಾಕ್ರೆ, 'ಜನವರಿ 23 ಇಂದು ಬಾಳಾಸಾಹೇಬ್ ಠಾಕ್ರೆಯವರ ಜನ್ಮದಿನ. ಈ ಸಂರ್ಭದಲ್ಲಿ ಮಹಾರಾಷ್ಟ್ರದ ಹಲವಾರು ಜನರು ನಾವು ಒಟ್ಟಿಗೆ ಸೇರಬೇಕೆಂದು ಬಯಸಿದ್ದಕ್ಕಾಗಿ ನನಗೆ ತೃಪ್ತಿ ಮತ್ತು ಸಂತೋಷವಾಗಿದೆ. ಪ್ರಕಾಶ್ ಅಂಬೇಡ್ಕರ್ ಮತ್ತು ನಾನು ಇಂದು ಮೈತ್ರಿ ಮಾಡಿಕೊಳ್ಳಲು ಬಂದಿದ್ದೇವೆ' ಎಂದರು.
ಇನ್ನು ನನ್ನ ತಾತ ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ಅಜ್ಜ ಸಹೋದ್ಯೋಗಿಗಳಾಗಿದ್ದರು ಮತ್ತು ಅವರು ಸಾಮಾಜಿಕ ಸಮಸ್ಯೆಗಳ ವಿರುದ್ಧ ಆ ಸಮಯದಲ್ಲಿ ಹೋರಾಡಿದರು. ಠಾಕ್ರೆ ಮತ್ತು ಅಂಬೇಡ್ಕರ್ ಅವರಿಗೆ ಇತಿಹಾಸವಿದೆ. ಈಗ ಅವರ ಮುಂದಿನ ಪೀಳಿಗೆಗಳು ದೇಶದ ಪ್ರಸ್ತುತ ಸಮಸ್ಯೆಗಳ ಬಗ್ಗೆ ಹೋರಾಡಲು ಇಲ್ಲಿದ್ದಾರೆ ಎಂದಿದ್ದಾರೆ.