ನವದೆಹಲಿ, ಜ 23 (DaijiworldNews/HR): ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಬಲಿಷ್ಠ ಶ್ರೇಷ್ಠ ಭಾರತದ ಕನಸನ್ನು ನಾವು ನನಸು ಮಾಡಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನೇತಾಜಿ ಸುಭಾಶ್ಚಂದ್ರ ಬೋಸ್ ಅವರ 126ನೇ ಜನ್ಮ ಜಯಂತಿ ಅಂಗವಾಗಿ ಮಾತನಾಡಿದ ಅವರು, ನಾವು ನೇತಾಜಿಯವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮವಹಿಸಬೇಕು. ಭಾರತದ ನಾಯಕತ್ವಗಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ. ಈ ಮೂಲಕ ನಾವು ವಿಶ್ವಗುರುವಾಗಬೇಕು ಎಂದರು.
ಇನ್ನು ನೇತಾಜಿ ಅವರು ದೇಶಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ನೇತಾಜಿಯವರು ಬಹುತೇಕ ತಮ್ಮ ದೇಶಭ್ರಷ್ಟರಾಗಿಯೇ ಜೀವನ ಕಳೆಯುವಂತಾಗಿತ್ತು ಎಂದು ಭಾಗವತ್ ಹೇಳಿದ್ದಾರೆ.