ಸಿಕ್ಕಿಂ, ಜ 23 (DaijiworldNews/HR): ಭಾರತದ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯವಾದ ಸಿಕ್ಕಿಂ ತನ್ನ ಜನಸಂಖ್ಯೆಯನ್ನು ಹೆಚ್ಚಿಸಲು ವಿಶಿಷ್ಟವಾದ ಒಂದು ಮಾರ್ಗವನ್ನು ಕಂಡುಕೊಂಡಿದೆ.
ರಾಜ್ಯವು ಮಹಿಳಾ ಸರ್ಕಾರಿ ನೌಕರರು ಎರಡು ಅಥವಾ ಅದಕ್ಕಿಂತ ಹೆಚ್ಚು ಶಿಶುಗಳಿಗೆ ಜನ್ಮ ನೀಡಿದರೆ ಅವರಿಗೆ ಬಹುಮಾನ ನೀಡಲು ನಿರ್ಧರಿಸಿದೆ.
ಇನ್ನು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಮಹಿಳಾ ಸರ್ಕಾರಿ ನೌಕರರಿಗೆ ಎರಡನೇ ಮಗುವಿಗೆ ಜನ್ಮ ನೀಡಿದರೆ ವಿಶೇಷ ಇನ್ಕ್ರಿಮೆಂಟ್ ಮತ್ತು ಮೂರನೇ ಮಗುವಿಗೆ ಜನ್ಮ ನೀಡಿದರೆ ಎರಡು ಇನ್ಕ್ರಿಮೆಂಟ್ಗಳನ್ನು ಪ್ರಸ್ತಾಪಿಸಿದೆ ಎನ್ನಲಾಗಿದೆ.