ಚಿಕ್ಕಬಳ್ಳಾಪುರ, ಜ. 23 (DaijiworldNews/SM): ಕಾಂಗ್ರೆಸ್ ಪಕ್ಷ ಸುಧಾಕರ್ ಅವರಿಗೆ ರಾಜಕೀಯ ಜನ್ಮ ಕೊಟ್ಟಿದೆ. 2013ರಲ್ಲಿ ಅಂಜನಪ್ಪಅವರಿಗೆ ಟಿಕೇಟ್ ನೀಡುವಂತೆ ವೀರಪ್ಪ ಮೊಯ್ಲಿ ಅವರು ಹೇಳಿದರು, ಆದರೆ ನಾನು ಮತ್ತು ಪರಮೇಶ್ವರ್ ಅವರು ಸುಧಾಕರ್ ಅವರಿಗೆ ಟಿಕೇಟ್ ನೀಡಿ ಇಂದುಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
2013ರಲ್ಲಿ, 2018ರಲ್ಲಿ ಸುಧಾಕರ್ ಶಾಸಕರಾಗಿ ನಮ್ಮ ಜೊತೆ ಇದ್ದರು. ನಂತರ ದುರಾಸೆಗೆ ಒಳಗಾಗಿ ಪಕ್ಷ ಬಿಟ್ಟು ಬಿಜೆಪಿ ಸೇರಿದರು' ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
|
ನಗರದಲ್ಲಿ ಕಾಂಗ್ರೆಸ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಚಿವ ಅಶ್ವತ್ಥ ನಾರಾಯಣ ಮತ್ತು ಸುಧಾಕರ್ ಅವರು ಪತ್ರಿಕಾಗೋಷ್ಠಿ ಮಾಡಿ ನಮ್ಮ ಸರ್ಕಾರದ ಸಚಿವರ ಮೇಲೆ ಆರೋಪ ಮಾಡಿದ್ದಾರೆ.
ಜಾರ್ಜ್ ಅವರು ವೈಟ್ ಟಾಪಿಂಗ್ ನಲ್ಲಿ ದುಡ್ಡು ಮಾಡಿದ್ದಾರೆ, ಸಿದ್ದರಾಮಯ್ಯ ಅವರು ರೀಡೂ ಮಾಡಿದ್ದಾರೆ ಎನ್ನುತ್ತಾರೆ, ಈ ರೀಡೂ ಪದವನ್ನು ಉಪಯೋಗಿಸಿದ್ದು ಹೈಕೋರ್ಟ್. ಸಿದ್ದರಾಮಯ್ಯ ಅವರ ಕಾಲದ ಆಡಿಟ್ ರಿಪೋರ್ಟ್ ಬಂದಿದೆ. ಭ್ರಷ್ಟಾಚಾರ ನಡೆದಿದೆ ಎನ್ನುತ್ತಾರೆ. ಇದೊಂದು ರೀತಿ ಭೂತದ ಬಾಯಲ್ಲಿ ಭಗವದ್ಗೀತೆ ಹಾಗಿದೆ. ರಾಜ್ಯದಲ್ಲಿ ಅತೀ ಭ್ರಷ್ಟ
ಸಚಿವರು ಇದ್ದರೆ ಅದು ಸುಧಾಕರ್ ಅವರು ಎಂದು ಆರೋಪಿಸಿದರು.