ನವದೆಹಲಿ, ಜ 23( DaijiworldNews/MS): ಮಕ್ಕಳು ಮತ್ತು ಗರ್ಭಿಣಿಯರ ಲಸಿಕೆ ಕಾರ್ಡ್ ನ್ನು ಲಸಿಕೆ ವೇಳೆ ಕೊಂಡೊಯ್ಯೊದು , ಅದನ್ನುಸುರಕ್ಷಿತವಾಗಿರಿಸುವುದು, ದಿನಾಂಕ ನೆನಪಿಟ್ಟುಕೊಳ್ಳುವುದು ಮತ್ತಿತರ ಕಿರಿಕಿರಿಗಳಿಗೆ ಪರಿಹಾರವಾಗಿ ಕೇಂದ್ರ ಸರಕಾರವು ಶೀಘ್ರ ಎಲ್ಲ ರೂಢಿಗತ ಲಸಿಕೆ ವಿತರಣೆಯನ್ನು ಡಿಜಿಟಲೀಕರಣಗೊಳಿಸುವತ್ತ ಮುಂದಡಿ ಇರಿಸಿದೆ.
ಕೋವಿಡ್ ಸಂದರ್ಭ ಆರಂಭಿಸಲಾದ Co-WIN ಡಿಜಿಟಲ್ ಪ್ಲಾಟ್ಫಾರ್ಮ್ನ ಯಶಸ್ಸಿನ ನಂತರ,ದೇಶದ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ (ಯುಐಪಿ)ಕ್ಕೆ ಯು-ವಿನ್ ಎಂಬ ಹೆಸರಿನಲ್ಲಿ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದೆ. ಇದನ್ನು ಈಗಾಗಲೇ ಪ್ರಯೋಗಿಕವಾಗಿ ಪ್ರತಿ ರಾಜ್ಯದ ಎರಡು ಜಿಲ್ಲೆಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಗೆ ತರಲಾಗಿದೆ.
ಗರ್ಭಿಣಿಯರ ನೋಂದಣಿಗೆ ಮತ್ತು ಲಸಿಕೆ ಹಾಕಲು, ಅವರ ಹೆರಿಗೆಯ ಫಲಿತಾಂಶವನ್ನು ದಾಖಲಿಸಲು, ಪ್ರತಿ ನವಜಾತ ಹೆರಿಗೆಯನ್ನು ನೋಂದಾಯಿಸಲು, ಜನನ ಪ್ರಮಾಣಗಳನ್ನು ಮತ್ತು ನಂತರದ ಎಲ್ಲಾ ಲಸಿಕೆ ಘಟನೆಗಳನ್ನು ನಿರ್ವಹಿಸಲು ಯು-ವಿನ್ ವೇದಿಕೆಯನ್ನು ಬಳಸಲಾಗುತ್ತದೆ