ಕೋಲ್ಕತಾ, ಜ 24 (DaijiworldNews/DB): ಪರಿತ್ಯಕ್ತ ಪತ್ನಿಗೆ ಮಾಸಿಕ 50 ಸಾವಿರ ರೂ. ಜೀವನಾಂಶ ನೀಡುವಂತೆ ಭಾರತದ ವೇಗಿ ಮುಹಮ್ಮದ್ ಶಮಿಗೆ ಕೋಲ್ಕತ್ತಾ ನ್ಯಾಯಾಲಯ ಆದೇಶಿಸಿದೆ.
ಅಲಿಪುರ ನ್ಯಾಯಾಲಯದ ನ್ಯಾಯಾಧೀಶರಾದ ಅನಿಂದಿತಾ ಗಂಗುಲಿ ಜನವರಿ 23ರಂದು ತೀರ್ಪು ನೀಡಿದ್ದಾರೆ. ಆದರೆ ತಿಂಗಳಿಗೆ 10 ಲಕ್ಷ ರೂ. ಜೀವನಾಂಶ ಬೇಡಿಕೆ ಇಟ್ಟಿದ್ದ ಜಹಾನ್ ಪ್ರಸ್ತುತ ನ್ಯಾಯಾಲಯದ ಆದೇಶದ ಮೇಲೆ ಅಸಮಾಧಾನಗೊಂಡಿದ್ದು, ಈ ತೀರ್ಪು ಪ್ರಶ್ನಿಸಿ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲಲ್ಇಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಶಮಿ ಪತ್ನಿ ಹಸಿನಾ ಜಹಾನ್ ಅವರು ಶಮಿ ವಿರುದ್ದ ಕಳೆದ ನಾಲ್ಕು ವರ್ಷಗಳ ಕೌಟುಂಬಿಕ ದೌರ್ಜನ್ಯ ಆರೋಪ ಹೊರಿಸಿದ್ದರು. ಅಲ್ಲದೆ ಈ ಸಂಬಂಧ ಜಾದವ್ಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದರು. ಆ ಬಳಿಕ ಅವರ ದಾಂಪತ್ಯದ ಕಲಹ ಹೆಚ್ಚಿತ್ತು. ಇನ್ನು ಕೌಟುಂಬಿಕ ದೌರ್ಜನ್ಯ, ಕೊಲೆ ಯತ್ನದ ಜಾಮೀನುರಹಿತ ಆರೋಪಗಳನ್ನೂ ಶಮಿ ವಿರುದ್ದ ಹೊರಿಸಲಾಗಿತ್ತು.