ನವದೆಹಲಿ, ಜ 23( DaijiworldNews/MS): ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನ ಉಂಟಾಗಿರುವ ಘಟನೆ ನಡೆದಿದೆ. ಭೂಮಿ ಕಂಪನದಿಂದ ಕಟ್ಟಡಗಳಲ್ಲಿರುವವರಿಗೆ ಸುಮಾರು 30 ಸೆಕೆಂಡುಗಳ ಕಾಲ ನಡುಕದ ಅನುಭವ ಉಂಟಾಗಿದ್ದು ಈ ವಲಯದಲ್ಲಿ ಅನೇಕರು ಭಯಬೀತರಾಗಿ ಮನೆಯಿಂದ ಹೊರಕ್ಕೆ ಓಡಿ ಬಂದಿರುವ ವರದಿಯಾಗಿದೆ.
"ಇಂದು ಮಧ್ಯಾಹ್ನ 2:28 ಕ್ಕೆ ಉತ್ತರಾಖಂಡದ ನೇಪಾಳದಲ್ಲಿ ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ" ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್ಸಿಎಸ್) ತಿಳಿಸಿದೆ.
ಇದರ ಪರಿಣಾಮ ದೆಹಲಿಯಲ್ಲಿ ಭೂಕಂಪನ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.
ದೆಹಲಿ ನಿವಾಸಿಗಳು ಭೂಕಂಪದ ನಂತರ ಸೀಲಿಂಗ್ ಫ್ಯಾನ್ಗಳು ಮತ್ತು ಮನೆಯ ವಸ್ತುಗಳು ಅಲುಗಾಡುತ್ತಿರುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಭೂಕಂಪದಿಂದ ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ಇದುವರೆಗೆ ವರದಿಯಾಗಿಲ್ಲ