ಮೈಸೂರು, ಜ 25( DaijiworldNews/MS): ಅಕ್ರಮ ಗಣಿ ವರದಿಯಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳ ಹೆಸರು ಕೊಟ್ಟಿದ್ದೆ ಅದರಲ್ಲಿ, ಎಲ್ಲಾ ಪಕ್ಷದ ನಾಯಕರೂ ಇದ್ದರು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಲೋಕಾಯುಕ್ತಕ್ಕೆ ಇದ್ದ ಅಧಿಕಾರದಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೆವು. ಅದನ್ನು ತೆಗೆದು ಎಸಿಬಿ ಜಾರಿಗೆ ತಂದರು. ಆದರೆ ಈಗ ಲೋಕಾಯುಕ್ತಕ್ಕೆ ಪರಮಾಧಿಕಾರ ಇದೆ. ಅದರ ಜವಾಬ್ದಾರಿ ವಹಿಸಿಕೊಳ್ಳುವವರು ತಮ್ಮ ಅಧಿಕಾರವನ್ನು ಚಲಾಯಿಸಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕದ ಲೋಕಾಯುಕ್ತಕ್ಕೆ ಹೋಲಿಸಿದರೆ ದೇಶದಲ್ಲಿ ಬೇರೆ ಬಲಿಷ್ಠ ಸಂಸ್ಥೆಯೇ ಇಲ್ಲ. ಆದರೆ ಅಧಿಕಾರದಲ್ಲಿ ಇದ್ದವರಿಗೆ ಬಲಿಷ್ಠ ಲೋಕಾಯುಕ್ತ ಬರುವುದು ಬೇಕಿಲ್ಲ ಎಂದು ಬೇಸರಿಸಿದರು.