ಬೆಂಗಳೂರು, ಜ 25 (DaijiworldNews/DB): ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ ಅವರ ಯಾತ್ರೆಯ ಉದ್ದೇಶ ಶ್ಲಾಘನೀಯ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಸಮಾರಂಭಕ್ಕೆ ಆಹ್ವಾನಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪತ್ರಕ್ಕೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ, ಹಿಂಸಾಚಾರಗಳ ವಿರುದ್ದ ಹೋರಾಡಲು ಮುಂದಾದ ರಾಹುಲ್ ಗಾಂಧಿಯವರ ಉದ್ದೇಶ ಉತ್ತಮ. ವೈಯಕ್ತಿಕವಾಗಿ ನಾನು ಸಮಾರಂಭದಲ್ಲಿ ಪಾಲ್ಗೊಳ್ಳಲಾಗುವುದಿಲ್ಲ. ಆದರೆ ಅವರಿಗೆ ನನ್ನ ಶುಭಾಶಯ ಇದೆ. ಸಾಮರಸ್ಯದ ಸಂದೇಶ ಹರಡುವಲ್ಲಿ ಅವರ ಯಾತ್ರೆ ಅತ್ಯುತ್ತಮ ಕೆಲಸ ಮಾಡಿದೆ ಎಂದರು.
ಕಳೆದ ವರ್ಷ ಸೆಪ್ಟಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಈವರೆಗೆ 3,500 ಕಿಮೀ ತನಕ ಸಾಗಿದ್ದು, ಕಾಶ್ಮೀರದಲ್ಲಿ ಸಮಾಪನಗೊಳ್ಳುತ್ತಿದೆ. ಸಮಾರೋಪ ಸಮಾರಂಭ ಜನವರಿ 26ರ ಗುರುವಾರ ನಡೆಯಲಿದೆ. ಹಲವಾರು ಗಣ್ಯರು ರಾಹುಲ್ ಗಾಂಧಿಯವರೊಂದಿಗೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.