ದೆಹಲಿ, ಜ 25 (DaijiworldNews/SM): 74ನೇ ಗಣರಾಜ್ಯೋತ್ಸವದ ಮುನ್ನಾ ದಿನ ಕೇಂದ್ರ ಸರ್ಕಾರ 2023ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಒಟ್ಟು 106 ಸಾಧಕರಿಗೆ ಪದ್ಮ ಪ್ರಶಸ್ತಿ ಲಭಿಸಿದೆ.
ರಾಜಕೀಯ ಮುತ್ಸದಿ ಎಸ್.ಎಂ.ಕೃಷ್ಣ ಸೇರಿ 6 ಸಾಧಕರಿಗೆ ಪದ್ಮವಿಭೂಷಣ ಹಾಗೂ ಸಾಹಿತಿ ಎಸ್ಎಲ್ ಭೈರಪ್ಪ, ಮತ್ತು ಸುಧಾಮೂರ್ತಿ ಸೇರಿದಂತೆ 9 ಸಾಧಕರಿಗೆ ಪದ್ಮಭೂಷಣ ಸಿಕ್ಕಿದೆ. ಇನ್ನು 91 ಸಾಧಕರಿಗೆ ಪದ್ಮ ಶ್ರೀ ಪ್ರಶಸ್ತಿ ಲಭಿಸಿದೆ. 91 ಪದ್ಮ ಶ್ರೀ ಪ್ರಶಸ್ತಿಗೆ ಕರ್ನಾಟಕದ ಐವರು ಆಯ್ಕೆಯಾಗಿದ್ದಾರೆ.
ಇನ್ನು 106 ಪದ್ಮಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಆರು ಜನರು ಪದ್ಮವಿಭೂಷಣ, ಒಂಬತ್ತು ಜನರು ಪದ್ಮಭೂಷಣ ಮತ್ತು 91 ಜನರು ಪದ್ಮಶ್ರೀ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಪಶಸ್ತಿ ವಿಜೇತರ ಪಟ್ಟಿಯಲ್ಲಿ 19 ಮಂದಿ ಮಹಿಳೆಯರಿದ್ದು, ಇಬ್ಬರು ವಿದೇಶಿಯರು/ಎನ್ನಾರೈ/ಪಿಐಒ/ಒಸಿಐ ವರ್ಗದವರಿಗೆ ಪ್ರಶಸ್ತಿ ಲಭಿಸಲಿದೆ. ಮರಣೋತ್ತರವಾಗಿ ಏಳು ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಕರ್ನಾಟಕಕ್ಕೆ ಒಟ್ಟು ಎಂಟು ಪ್ರಶಸ್ತಿಗಳು ಸಿಕ್ಕಿದ್ದು, ಖಾದರ್ ವಲ್ಲಿ ದುಡೆಕಳ (ವಿಜ್ಞಾನ ಮತ್ತು ಇಂಜಿನಿಯರಿಂಗ್),ರಾಣಿ ಮಾಚಯ್ಯ (ಕಲೆ),ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ( ಕಲೆ),ಶಾ ರಶೀದ್ ಅಹ್ಮದ್ ಕಾದ್ರಿ (ಕಲೆ) ಮತ್ತು ಎಸ್.ಸುಬ್ಬರಾಮನ್ (ಪುರಾತತ್ವ) ಅವರು ಪದ್ಮಶ್ರೀ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಮಾರ್ಚ್/ಎಪ್ರಿಲ್ ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನಿಸಲಿದ್ದಾರೆ.