ನವದೆಹಲಿ, ಜ 26 (DaijiworldNews/HR): ಭಾರತದಲ್ಲಿ ಮೊದಲ ಬಾರಿಗೆ ವಿಶ್ವದ ಮೊದಲ ಮೇಡ್ ಇನ್ ಇಂಡಿಯಾ ಮೂಗಿನ ಲಸಿಕೆ ಇನ್ಕೋವ್ಯಾಕ್(NCOVACC') ಅನ್ನು ಇಂದು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವೀಯ ಬಿಡುಗಡೆ ಮಾಡಲಿದ್ದಾರೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ನ ಇಂಟ್ರಾನಾಸಲ್ ಹೆಟೆರೊಲೊಗಸ್ ಬೂಸ್ಟರ್ ಡೋಸ್ ಫೆಬ್ರವರಿ ಮೊದಲ ವಾರದ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.
ಇನ್ನು ಭಾರತ್ ಬಯೋಟೆಕ್ ದೇಶದಲ್ಲಿ ಐಎನ್ ಸಿಒವಿಎಸಿ (BBV154)ನ್ನ ಬೂಸ್ಟರ್ ಡೋಸ್ ಎಂದು ಇತ್ತೀಚೆಗೆ ಘೋಷಿಸಿದ್ದು, ಈ ಲಸಿಕೆ ಇದೇ ತಿಂಗಳ ಆರಂಭದಲ್ಲಿ, ಭಾರತ್ ಬಯೋಟೆಕ್ ಇನ್ಕೋವ್ಯಾಕ್(iNCOVACC) ಹೆಟೆರೊಲೊಗಸ್ ಬೂಸ್ಟರ್ ಡೋಸ್'ಗಳನ್ನ ಬಳಸಲು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನಿಂದ ಅನುಮೋದನೆ ಪಡೆದುಕೊಂಡಿದೆ.