ನವದೆಹಲಿ, ಜ 26 (DaijiworldNews/DB): ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ವಿರುದ್ದ ವಿಜಯವಾಡ ಪಟಮಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಪುಗಳ ಬಗ್ಗೆ ಅನುಚಿತ ಕಾಮೆಂಟ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.
ಐಕ್ಯ ಕಾಪುನಾಡು ರಾಜ್ಯಾಧ್ಯಕ್ಷ ಬೇತು ರಾಮಮೋಹನ ರಾವ್ ಅವರು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ದ ದೂರು ದಾಖಲು ಮಾಡಿದ್ದು, ವರ್ಮಾ ಅವರು ಟ್ವಿಟರ್ನಲ್ಲಿ ಕಾಪುಗಳ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದಾರೆ. ಜಾತಿಗಳ ನಡುವೆ ಸಂಘರ್ಷ ಎಬ್ಬಿಸುವ ಪೋಸ್ಟ್ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಟಿಡಿಪಿ ಮುಖ್ಯಸ್ಥ ಚಂದ್ರಬಾಬು, ಜನಸೇನಾ ಅಧ್ಯಕ್ಷ ಪವನ್ ಭೇಟಿ ಕುರಿತು ರಾಮ್ ಗೋಪಾಲ್ ವರ್ಮಾ ಮಾಡಿದ ಟ್ವೀಟ್ ಸಂಚಲನಕ್ಕೆ ಕಾರಣವಾಗಿದೆ. ಕಮ್ಮ ಅವರು ಕಾಪುವನ್ನು ಹಣಕ್ಕಾಗಿ ಮಾರುತ್ತಾರೆ. ಆರ್ಐಪಿ ಕಾಪುಗಳೇ ಕಮ್ಮಾ ಜನರಿಗೆ ಅಭಿನಂದನೆಗಳು ಎಂಬುದಾಗಿ ಅವರು ಟ್ವೀಟಿಸಿದ್ದರು.