ಅಹಮದಾಬಾದ್, ಜ 26 (DaijiworldNews/HR): ಗಣರಾಜ್ಯೋತ್ಸವ ಆಚರಣೆ ದಿನವೇ ಅಹಮದಾಬಾದ್ ಬಾಂಬ್ ಸ್ಫೋಟಿಸುವ ಕುರಿತು ಬೆದರಿಕೆಯ ಪತ್ರ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಗಣರಾಜ್ಯೋತ್ಸವ ಆಚರಣೆ ದಿನದಂದು ಅಹಮದಾಬಾದ್ ರೈಲು ನಿಲ್ದಾಣದಲ್ಲಿ ಮತ್ತು ಗೀತಾ ಮಂದಿರ ಬಸ್ ನಿಲ್ದಾಣ ಗಳಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಬೆದರಿಕೆ ಪ್ರತವೊಂದನ್ನು ರವಾನಿಸಲಾಗಿದೆ.
ಇನ್ನು ಬೆದರಿಕೆ ಪತ್ರವನ್ನು ಅಹಮದಾಬಾದ್ ಪೊಲೀಸ್ ಕಮಿಷನರ್ ಕಚೇರಿಗೆ ತಲುಪಿಸಲಾಗಿದ್ದು, ಪತ್ರದಲ್ಲಿ ಕೆಲವು ಸಂಖ್ಯೆಗಳನ್ನು ಸಹ ಉಲ್ಲೇಖಿಸಲಾಗಿದೆ. ನಾಲ್ವರು ಆರೋಪಿಗಳ ಪೈಕಿ ಇಬ್ಬರು ಅಹಮದಾಬಾದ್ ಮತ್ತು ಮತ್ತಿಬ್ಬರು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.