ನವದೆಹಲಿ, ಜ 26 (DaijiworldNews/DB): ಗುಲಾಮಗಿರಿ ಮನಸ್ಥಿತಿಯಿಂದ ಭಾರತ ಹಿಂದೆ ಸರಿಯುತ್ತಿದೆ. ದೇಶದ ಶ್ರೀಮಂತ ಪರಂಪರೆಯನ್ನು ಯುವಜನರು ಮುಂದುವರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ಕೆಡೆಟ್ಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವಿನ್ನೂ ಸಣ್ಣವರು. ಈ ವಯಸ್ಸು ನಿಮ್ಮ ಭವಿಷ್ಯ ರೂಪಿಸುವ ಸಮಯವಾಗಿದೆ. ದೇಶದ ಭವಿಷ್ಯ ರೂಪಿಸುವ ಹೊಣೆಗಾರಿಕೆಯೂ ನಿಮ್ಮ ಮೇಲಿದೆ. ಭಾರತ ಗುಲಾಮಗಿರಿ ಮನಸ್ಥಿತಿಯಿಂದ ಹೊರ ಬಂದು, ದೇಶೀಯತೆಯ ಉತ್ತುಂಗದಲ್ಲಿದೆ. ಶ್ರೀಮಂತ ಪರಂಪರೆ ನಮ್ಮ ದೇಶದಲ್ಲಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಹೊಸ ಆಲೋಚನೆ ಮತ್ತು ಮಾನದಂಡಗಳ ಸೃಷ್ಟಿಕರ್ತರೇ ದೇಶದ ಯುವಕರು. ಯುವಕರ ಗುರಿ ಮತ್ತು ನಿರ್ಣಯ ದೇಶದ ಭವಿಷ್ಯಕ್ಕೆ ಅತ್ಯಂತ ಅವಶ್ಯಕವಾಗಿದೆ. ದೇಶದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಯುವಕರು ಜಾಗೃತರಾಗಬೇಕು ಎಂದು ಪ್ರತಿಪಾದಿಸಿದರು.