ನವದೆಹಲಿ, ಜ 26 (DaijiworldNews/DB): ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಇನ್ನಷ್ಟು ಹೊಸತನಗಳನ್ನು ಪರಿಚಯಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 16 ಕೋಚ್ಗಳ ಬದಲಾಗಿ 8 ಕೋಚ್ಗಳನ್ನು ಅಭಿವೃದ್ದಿಪಡಿಸಲು ಚಿಂತನೆ ನಡೆಸಲಾಗಿದೆ.
ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಸದ್ಯ ಮಾದರಿಯನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಪ್ರಸ್ತುತ ಓಡಾಟ ನಡೆಸುತ್ತಿರುವ 12 ರೈಲುಗಳು 16 ಕೋಚ್ಗಳನ್ನು ಒಳಗೊಂಡಿದ್ದು, ಮುಂದಿನ ಎರಡು ತಿಂಗಳಲ್ಲಿ ಓಡಾಟಕ್ಕೆ ಸಿದ್ದಗೊಳ್ಳುವ ರೈಲುಗಳು ಎಂಟು ಕೋಚ್ಗಳನ್ನು ಹೊಂದಿರಲಿದೆ.
ನಿರ್ವಹಣೆ ಮತ್ತು ದುರಸ್ತಿಗೂ ಸುಲಭವಾಗಲಿದ್ದು, ನಗರಗಳ ನಡುವಿನ ಸಂಚಾರಕ್ಕೆ ಈ ರೈಲುಗಳು ಹೆಚ್ಚು ಅನುಕೂಲವಾಗಲಿದೆ. ಇನ್ನು ಎಂಟು ಅಥವಾ ಹನ್ನೆರಡು ಕೋಚ್ಗಳಿರುವ ರೈಲು ಅಭಿವೃದ್ದಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ರೈಲ್ವೇ ಇಲಾಖೆಯ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.