ಭೋಪಾಲ್, ಜ 26 (DaijiworldNews/DB): ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಎಂಟು ಚೀತಾಗಳ ಪೈಕಿ ಒಂದು ಚೀತಾ ಕಿಡ್ನಿ ಸೋಂಕಿಗೆ ಒಳಗಾಗಿದ್ದು ಸದ್ಯ ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ.
ಸಾಶಾ ಎಂಬ ಚೀತಾ ಅನಾರೋಗ್ಯಕ್ಕೆ ಒಳಗಾಗಿದೆ. ಸೋಮವಾರ ದೈನಂದಿನ ಮೇಲ್ವಿಚಾರಣೆ ವೇಳೆ ಸಾಶಾ ಚೀತಾವು ಆಯೋಸದಿಂದ ಬಳಲುತ್ತಿತ್ತು. ಕೂಡಲೇ ಅದನ್ನು ಟ್ರಾನ್ಸ್ಕ್ವಿಲೈಸ್ ಮಾಡಿ ಕ್ವಾರಂಟೈನ್ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಆರೋಗ್ಯ ತಪಾಸಣೆ ನಡೆಸಿದಾಗ ಕೊಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವುದು ಗೊತ್ತಾಗಿತ್ತು. ಕೂಡಲೇ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುನೋ ನ್ಯಾಷನಲ್ ಪಾರ್ಕ್ನ ವಿಭಾಗೀಯ ಅರಣ್ಯಾಧಿಕಾರಿ(ಡಿಎಫ್ಒ) ಕುಮಾರ್ ವರ್ಮಾ ಹೇಳಿದ್ದಾರೆ.
ಭಾರತದಲ್ಲಿ ಚೀತಾಗಳ ಸಂತತಿ ಹೆಚ್ಚಳಕ್ಕಾಗಿ ನಮೀಬಿಯಾದಿಂದ ಕಳೆದ ವರ್ಷ ತಂದ ಈ ಎಂಟು ಚೀತಾಗಳನ್ನು ಮಧ್ಯ ಪ್ರದೇಶದ ಕುನೋ ನ್ಯಾಷನಲ್ ಪಾರ್ಕ್ನಲ್ಲಿ ಬಿಡಲಾಗಿದೆ. 3 ಗಂಡು, 5 ಹೆಣ್ಣು ಚೀತಾಗಳಿದ್ದು, ಇನ್ನೂ 12 ಚೀತಾಗಳನ್ನು ತರಿಸಲಾಗುತ್ತದೆ.