ನವದೆಹಲಿ, ಜ 27 (DaijiworldNews/DB): ಚೀನಾವು ಲಡಾಖ್ನ ಹಿಮಾಲಯ ಭಾಗದಲ್ಲಿ ಸೇನಾ ಮೂಲ ಸೌಕರ್ಯವನ್ನು ಹೆಚ್ಚಳ ಮಾಡುತ್ತಿದೆ. ಭಾರತ-ಚೀನಾ ನಡುವಿನ ಘರ್ಷಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಲಡಾಖ್ ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಮೌಲ್ಯಮಾಪನದ ವೇಳೆ ಪೊಲೀಸರಿಗೆ ಈ ಅಂಶ ತಿಳಿದು ಬಂದಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಆದರೆ ಭಾರತೀಯ ಸೇನೆ ಅಥವಾ ಭಾರತದ ರಕ್ಷಣಾ, ವಿದೇಶಾಂಗ ಸಚಿವಾಲಯದಿಂದ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಚೀನಾವು ಲಡಾಖ್ನ ಹಿಮಾಲಯ ಭಾಗದಲ್ಲಿ ತನ್ನ ಸೇನಾ ಮೂಲ ಸೌಕರ್ಯವನ್ನು ಹೆಚ್ಚಿಸುತ್ತಿದೆ. ಜನವರಿ 20 ರಿಂದ 22 ರವರೆಗಿನ ಸ್ಥಿತಿಗತಿಗಳ ವರದಿಯನ್ನು ಉನ್ನತ ಪೊಲೀಸ್ ಅಧಿಕಾರಿಗಳ ಸಮ್ಮೇಳನದಲ್ಲಿ ಲಡಾಕ್ ಪೊಲೀಸರು ಸಲ್ಲಿಸಿದ್ದಾರೆ ಎನ್ನಲಾಗಿದೆ.