ನವದೆಹಲಿ,ಜ 28 ( DaijiworldNews/MS): ಕೆಲವು ಚಲನಚಿತ್ರಗಳನ್ನು ಗುರಿಯಾಗಿಸಿಕೊಂಡು ಬಯ್ಕಟ್ ಸಂಸ್ಕೃತಿ( ಬಹಿಷ್ಕಾರ ) ಯನ್ನು ಹಾಕುವುದನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಖಂಡಿಸಿದ್ದಾರೆ.
ಭಾರತವು ಮೃದು ಶಕ್ತಿಯಾಗಿ ತನ್ನ ಪ್ರಭಾವವನ್ನು ಹೆಚ್ಚಿಸಲು ಉತ್ಸುಕರಾಗಿರುವ ಸಮಯದಲ್ಲಿ ಇಂತಹ ನಿದರ್ಶನಗಳು ವಾತಾವರಣವನ್ನು ಹಾಳುಮಾಡುತ್ತವೆ ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ಯಾರಿಗಾದರೂ ಸಿನಿಮಾ ಸಮಸ್ಯೆ ಎದುರಾದರೆ ಸಂಬಂಧಪಟ್ಟ ಸರ್ಕಾರಿ ಇಲಾಖೆಯೊಂದಿಗೆ ಮಾತನಾಡಿ ಸಿನಿಮಾ ನಿರ್ಮಾಪಕರ ಜತೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದೂ ಅವರು ಹೇಳಿದ್ದಾರೆ.
ಸೃಜನಶೀಲತೆಗೆ ಯಾವುದೇ ನಿರ್ಬಂಧಗಳು ಇರಬಾರದು, OTT ಪ್ಲಾಟ್ಫಾರ್ಮ್ಗಳಲ್ಲಿನ ವಿಷಯದ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೂರುಗಳನ್ನು ಸ್ವೀಕರಿಸುತ್ತದೆ, ಆದರೆ ಸುಮಾರು 95 ಪ್ರತಿಶತ ಕುಂದುಕೊರತೆಗಳನ್ನು ನಿರ್ಮಾಪಕರ ಮಟ್ಟದಲ್ಲಿ ಇತ್ಯರ್ಥಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.