ಬೆಂಗಳೂರು, ಜ 28 (DaijiworldNews/HR): 40% ಸರ್ಕಾರದಲ್ಲಿ ಬಡ್ತಿಗೆ ಹಣವೇ ಅರ್ಹತೆ! ಹಣವೊಂದಿದ್ದರೆ ಆರೋಗ್ಯ ಇಲಾಖೆಯಲ್ಲಿ ಅನರ್ಹರಿಗೆ ಬಡ್ತಿ ಸಿಗಲಿದೆ ಎಂದು ರಾಜ್ಯ ಸರ್ಕಾರ ವಿರುದ್ದ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಸಚಿವ ಸುಧಾಕರ್ ಕೂಡ ಅರ್ಹತೆ ಇಲ್ಲದ ಸಚಿವ, ಅವರು ನೇಮಿಸುವ ನಿರ್ದೇಶಕರೂ ಅನರ್ಹರಾಗಿರುತ್ತಾರೆ. ರಾಜಕೀಯ ಹೇಳಿಕೆ ನೀಡಲು ಮುಂದೆ ಬರುವ ಸಚಿವರಿಗೆ ಎಕ್ಸ್ ರೇ ಸಿಬ್ಬಂದಿಗಳ ಪ್ರತಿಭಟನೆಯನ್ನು ನಿಭಾಯಿಸಲಾಗದಿರುವುದೇಕೆ? ಎಂದು ಪ್ರಶ್ನಿಸಿದೆ.
ಇನ್ನು ವಂಚನೆಯ ಆರೋಪಕ್ಕೆ ಸಿಲುಕಿರುವ ಅದಾನಿ ಸಮೂಹದಿಂದ ಎಲ್ಐಸಿಯ ಸಾವಿರಾರು ಕೋಟಿ ಹಣ ಗುಳುಂ ಆಗಿದೆ. ಮಧ್ಯಮ ವರ್ಗದ ಶ್ರಮದ ದುಡಿಮೆಯ ಹಣವನ್ನು ವಂಚಕ ಅದಾನಿ ಕಂಪೆನಿಯ ಮೇಲೆ ಹೂಡಿಕೆ ಮಾಡುವಂತೆ ಸರ್ಕಾರೀ ಸ್ವಾಮ್ಯದ ಎಲ್ಐಸಿಮೇಲೆ ಒತ್ತಡ ಹೇರಿದವರು ಯಾರು? ಜನಸಾಮಾನ್ಯರ ಹಣಕ್ಕೆ ಈ ಸರ್ಕಾರದಲ್ಲಿ ರಕ್ಷಣೆ ಇಲ್ಲವಾಗಿದೆ ಎಂದು ವಾಗ್ದಾಳಿ ನಡೆಸಿದೆ.
8022044560