ಹುಣಸೂರು, ಜ 28 (DaijiworldNews/HR): ಹುಣಸೂರು ತಾಲೂಕಿನ ಯಶೋಧರಪುರ ಗೇಟ್ನಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕನ ಅಜಾಗರೂಕತೆ ಚಾಲನೆಯಿಂದಾಗಿ ಬ್ಲೇಡ್ ತುಂಡಾಗಿ ಹಿಂಬದಿಯ ಚಕ್ರಗಳು ಹೌಸಿಂಗ್ ಸಹಿತ ಕಳಚಿ ಬಿದ್ದರೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಕೆ.ಆರ್.ನಗರ ಡಿಪೋಗೆ ಸೇರಿದ ಬಸ್ ಸೋಮವಾರಪೇಟೆ ಕಡೆಯಿಂದ ಮೈಸೂರಿಗೆ ಬರುತ್ತಿದ್ದ ಚಾಲಕ ಬಂದ ವೇಗದಲ್ಲೇ ಹುಣಸೂರು ತಾಲೂಕಿನ ಯಶೋಧರಪುರ ಗೇಟ್ ಬಳಿಯ ಹಂಪ್ಸ್ ಮೇಲೆ ಓಡಿಸಿದ್ದರಿಂದ ಬಸ್ನ ಹಿಂಬದಿಯ ಬ್ಲೇಡ್ ತಂಡಾಗಿ, ಹೌಸಿಂಗ್ ಸಹಿತಿ ಚಕ್ರಗಳು ಕಳಚಿ ಬಿದ್ದಿದೆ.
ಇನ್ನು ಬಸ್ನ ಹಿಂದೆ ಯಾವುದೇ ವಾಹನಗಳು ಇಲ್ಲದ್ದರಿಂದ ಯಾವುದೇ ಅನಾಹುತವಾಗಲಿಲ್ಲ, ಅಲ್ಲದೆ ಬಸ್ನಲ್ಲಿದ್ದ 39 ಮಂದಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ವರದಿಯಾಗಿದೆ.