ನವದೆಹಲಿ, ಜ 29 (DaijiworldNews/DB): ದೇಶದಲ್ಲಿ ಬ್ರಿಟಿಷರ ಆಡಳಿತವಿದ್ದ ಸಂದರ್ಭದಲ್ಲಿ ಜನಸಾಮಾನ್ಯರ ಮೇಲೆ ದೌರ್ಜನ್ಯ ಹೆಚ್ಚಿತ್ತು. ಅದರ ವಿರುದ್ದ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಿಲ್ಲ ಏಕೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಶ್ನಿಸಿದ್ದಾರೆ.
ಭಾರತ ಅಭಿವೃದ್ದಿಯೆಡೆಗೆ ಸಾಗುತ್ತಿರುವುದನ್ನು ನೋಡಿದಾಗ ಕೆಲವರಿಗೆ ಹೊಟ್ಟೆ ಕಿಚ್ಚಾಗುತ್ತಿದೆ. ಕೆಲವು ದೇಶಗಳಿಗೆ ಭಾರತದ ಅಭಿವೃದ್ದಿ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ದೇಶದಲ್ಲಿ ಕೆಲವು ಬೆಳವಣಿಗೆ ನಡೆಯಲು ಅವರು ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ನ್ಯಾಯಾಂಗ ವ್ಯವಸ್ಥೆ ನೀಡುವ ತೀರ್ಪಿಗಿಂತ ಬಿಬಿಸಿ ಸಾಕ್ಷ್ಯಚಿತ್ರವೇ ನಿಜ ಎಂದು ನಮ್ಮ ದೇಶದಲ್ಲೇ ಕೆಲವರು ನಂಬುತ್ತಿರುವುದು ದುರದೃಷ್ಟಕರ ಎಂದವರು ಕಿಡಿ ಕಾರಿದರು.