ಭೋಪಾಲ್, ಜ 29 (DaijiworldNews/HR): ಬಿಜೆಪಿ ಸರ್ಕಾರವು ಕಟ್ಟುನಿಟ್ಟಾದ ಮದ್ಯ ನೀತಿ ಜಾರಿಗೊಳಿಸಿದರೆ ಮತ್ತೊಮ್ಮೆ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೇರಲಿದೆ ಎಂದು ಪಕ್ಷದ ಹಿರಿಯ ನಾಯಕಿ ಉಮಾ ಭಾರತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮಧ್ಯಪ್ರದೇಶ ವಿಧಾನಸಭೆಗೆ 2023ರ ಡಿಸೆಂಬರ್ನಲ್ಲಿ ಚುನಾವಣೆ ನಡೆಯಲಿದ್ದು, ಸರ್ಕಾರವು ಪ್ರತಿವರ್ಷ ಪ್ರಕಟಿಸುವ ಮದ್ಯ ನೀತಿಯಲ್ಲಿ ಸೂಕ್ತ ತಿದ್ದುಪಡಿಗಳನ್ನು ತರಬೇಕು. ಜನರನ್ನು ವ್ಯಸನಮುಕ್ತಗೊಳಿಸಲು ಉತ್ತೇಜಿಸುವ ನಿಯಂತ್ರಣಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಉಮಾ ಭಾರತಿ ಈ ಹಿಂದೆ ದೇವಾಲಯದ ಬಳಿ ಮದ್ಯದ ಅಂಗಡಿಗಳನ್ನು ತೆರೆಯುವುದನ್ನು ವಿರೋಧಿಸಿದ್ದರು.