ಗುವಾಹಟಿ, ಜ 29 (DaijiworldNews/DB): ಪ್ರಕರಣವೊಂದರ ವಾದ ಮಂಡಿಸಲು ಜೀನ್ಸ್ ಪ್ಯಾಂಟ್ ಧರಿಸಿ ನ್ಯಾಯಾಲಯಕ್ಕೆ ಬಂದಿದ್ದ ಹಿರಿಯ ನ್ಯಾಯವಾದಿಯೊಬ್ಬರನ್ನು ಗುವಾಹಟಿ ಹೈಕೋರ್ಟ್ ಡಿಕೋರ್ಟ್ (ನ್ಯಾಯಾಲಯದಿಂದ ಹೊರಗೆ ಕಳುಹಿಸುವುದು) ಮಾಡಿದೆ.
ಹಿರಿಯ ನ್ಯಾಯವಾದಿ ಬಿ.ಕೆ.ಮಹಾಜನ್ ಅವರೇ ಹೊರಗೆ ಕಳುಹಿಸಲ್ಪಟ್ಟ ನ್ಯಾಯವಾದಿ. ಶುಕ್ರವಾರ ಮಹಾಜನ್ ಅವರು ಪ್ರಕರಣವೊಂದನ್ನು ವಾದಿಸಲೆಂದು ನ್ಯಾಯಾಲಯಕ್ಕೆ ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದರು. ಇದನ್ನು ಗಮನಿಸಿದ ನ್ಯಾಯಮೂರ್ತಿ ಕಲ್ಯಾಣ್ ರೈ ಸುರಾನಾ ಅವರು ಪೊಲೀಸರನ್ನು ಕರೆದು ಮುಖ್ಯ ನ್ಯಾಯಮೂರ್ತಿ, ರಿಜಿಸ್ಟ್ರಾರ್ ಜನರಲ್ ಮತ್ತು ಬಾರ್ ಕೌನ್ಸಿಲ್ಗೆ ವಿಷಯ ತಿಳಿಸುವಂತೆ ಸೂಚಿಸಿದ್ದಾರೆ. ಆ ಬಳಿಕ ಹಿರಿಯ ನ್ಯಾಯವಾದಿಯನ್ನು ಡಿಕೋರ್ಟ್ ಮಾಡಲಾಯಿತು.
ಅರ್ಜಿದಾರರ ಪರ ವಕೀಲರು ಜೀನ್ಸ್ ಪ್ಯಾಂಟ್ನಲ್ಲಿ ನ್ಯಾಯಾಲಯಕ್ಕೆ ಆಗಮಿಸಿದ ಕಾರಣ ಅರ್ಜಿಯ ಪರಿಶೀಲನೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಲಾಯಿತು.